
ಬೆಂಗಳೂರು: ಪಾರ್ಕ್‌ಗಳಲ್ಲಿ ಕುಳಿತಿದ್ದ ಜೋಡಿಗಳನ್ನು ಟಾರ್ಗೆಟ್ ಮಾಡಿ ತಮ್ಮನ್ನು ಪೊಲೀಸ್ ಎಂದು ಪರಿಚಯಿಸಿಕೊಂಡು ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅನೀಫ್ ಖಾನ್ ಎಂದು ಗುರುತಿಸಲಾಗಿದೆ.
ಆಸಿಫ್ ಎಂಬಾತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಕಾನೂನು ರಕ್ಷಕರಂತೆ ನಟನೆ ಮಾಡಿ ಯುವಜೋಡಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಪಾರ್ಕ್‌ನಲ್ಲಿ ಕುಳಿತಿದ್ದವರ ಬಳಿ ಬಂದು, ಪೊಲೀಸ್ ತನಿಖೆ ಎಂದು ಭಯ ಹುಟ್ಟಿಸಿ ಹಣ ಹಾಗೂ ಆಭರಣ ಪಡೆದು ಪರಾರಿಯಾಗುತ್ತಿದ್ದ.
ಇತ್ತೀಚೆಗೆ, ಆಸಿಫ್ ಇಬ್ಬರು ವ್ಯಕ್ತಿಗಳಿಂದ 12 ಗ್ರಾಂ ಚಿನ್ನದ ಸರ, 5 ಗ್ರಾಂನ ಬೆಳ್ಳಿ ಉಂಗುರ ಹಾಗೂ ₹10,000 ನಗದು ಕಸಿದುಕೊಂಡು ತಪ್ಪಿಸಿಕೊಂಡಿದ್ದ. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಆಸಿಫ್ ಈ ರೀತಿಯ ಹಲವಾರು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.