ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಮಗುವನ್ನು ನಾಲೆಗೆ ಎಸೆದು ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿ ನಡೆದಿದೆ. ಭವ್ಯ (23), ವೇದಾಂತ್ (3) ಮೃತ ದುರ್ದೈವಿಗಳು.
ವೇದಾಂತ್ ಮೃತದೇಹ ಪತ್ತೆಯಾಗಿದ್ದು, ಭವ್ಯ ಅವರ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಮೂರು ವರ್ಷದ ಹಿಂದೆ ಶ್ರೀನಿವಾಸ್ ಎಂಬುವವರ ಜೊತೆ ವಿವಾಹವಾಗಿದ್ದ ಭವ್ಯಗೆ ಒಂದು ಮಗು ಇತ್ತು. ಆದ್ರೆ ಕೌಟುಂಬಿಕ ಜಗಳ ಹೆಚ್ಚಾದ್ದರಿಂದ ಮಗುವನ್ನು ನಾಲೆಗೆಸೆದು ಭವ್ಯಾ ಕೂಡಾ ಸಾವನ್ನಪ್ಪಿದ್ದಾರೆ. ಮಗುವಿನ ಮೃತದೇಹ ಗೆಜ್ಜಗಾರನಹಳ್ಳಿ ಬಳಿ ದೊರೆತಿದೆ. ಭವ್ಯ ಮೃತದೇಹಕ್ಕಾಗಿ ಇನ್ನೂ ಹುಡುಕಾಟ ನಡೆದಿದೆ. ಈ ಬಗ್ಗೆ ಹೊಳೆ ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.