
ಮುಂಡಗೋಡ:- ಓಣಿಕೇರಿಯಲ್ಲಿ ಬೋರ್ವೆಲ್ ಪಂಪ್ಸೆಟ್ ಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದು ಕಾಡುಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಹಾಕಿದ ತಂತಿಗೆ ಹಾನಗಲ್ ತಾಲೂಕಿನ ಬಾಳಂಬಿಡ್ ಗ್ರಾಮದ ಬಸವರಾಜ ಚಂದ್ರಪ್ಪ ಹರಿಜನ ಎನ್ನುವ ಯುವಕ ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ ತಾಲೂಕಿನ ಕಾತೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದಿಪುರದಲ್ಲಿ ಮತ್ತೂಂದು ವಿದ್ಯುತ್ ದುರಂತ ಸಂಭವಿಸಿದೆ.
ಅನಧೀಕೃತವಾಗಿ ವಿದ್ಯುತ್ ಕಂಬದಿಂದ ವೈಯರ್ ಮೂಲಕ ಸಂಪರ್ಕ ಪಡೆದಿದ್ದ ಸಂದರ್ಭದಲ್ಲಿ ಕಟ್ ಆಗಿ ಬಿದ್ದಿದ್ದ ವೈಯರ್ ತುಳಿದು, 60 ವರ್ಷದ ವ್ಯಕ್ತಿಯೊಬ್ಬ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಂದಿಪುರದ ಶಿವಪ್ಪ ನಾಗಪ್ಪ ವಡ್ಡರ್ (60) ವಿದ್ಯುತ್ ಆಘಾತದಿಂದ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ನಿನ್ನೆ ಬೆಳಿಗ್ಗೆ ಮನೆಯಿಂದ ಗದ್ದೆಗೆ ತೆರಳಿದ್ದ. ಆದ್ರೆ, ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಗದ್ದೆಗೆ ಹೋಗಿ ಹುಡುಕಾಡಿದ್ದಾರೆ. ಆ ವೇಳೆ ಆ ವ್ಯಕ್ತಿಯ ಶವವಾಗಿ ದೊರೆತಿದ್ದು, ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾನೆ.
ಅಂದಹಾಗೆ, ಪಕ್ಕದ ಗದ್ದೆಯ ಮೋಹನ್ ಸಹದೇವಪ್ಪ ಪಾಟೀಲ್ ಎಂಬುವವರು, ತಮ್ಮ ಬೋರವೆಲ್ ಗೆ ವಿದ್ಯುತ್ ಸಂಪರ್ಕ ಕಲ್ಪಸಲಿಸಲು, ಮೃತ ವ್ಯಕ್ತಿಯ ಗದ್ದೆಯಲ್ಲಿರೋ ವಿದ್ಯುತ್ ಕಂಬದಿಂದ ಅನಧೀಕೃತವಾಗಿ ವೈಯರ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ಎನ್ನಲಾಗಿದೆ. ಹಾಗೆ ಸಂಪರ್ಕ ಕಲ್ಪಿಸಿಕೊಂಡಿದ್ದ ವೈಯರ್ ತುಂಡಾಗಿದ್ದು, ಅದರಲ್ಲಿ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಮೃತ ಶಿವಪ್ಪ ನಾಗಪ್ಪ ವಡ್ಡರ ಆ ವೈಯರ್ ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮುಂಡಗೋಡ ಕ್ರೈಂ ಪಿಎಸ್ಐ ಹನ್ಮಂತ್ ಗುಡುಗುಂಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮೋಹನ್ ಸಹದೇವಪ್ಪ ಪಾಟೀಲ್ ಅವರು ಮೇಲೆ ಪ್ರಕರಣ ದಾಖಲಾಗಿದೆ.