ಕಲಬುರಗಿ: ಪ್ರಕೃತಿ ಅವಘಡಗಳು ಸಂಭವಿಸಿದಾಗ ತುರ್ತು ಸ್ಪಂದನೆ ಹಾಗೂ ನಂತರದ ಪರಿಹಾರ ಕಾರ್ಯಗಳು ಕಂದಾಯ ಇಲಾಖೆಯ ನೌಕರ, ಅಧಿಕಾರಿಗಳ ಕರ್ತವ್ಯವಾಗಿದೆ.
ಸರಕಾರವು ಕೂಡ ಈ ಸಮಯದಲ್ಲಿ ತಮ್ಮ ಇಲಾಖೆಗೆ ದುಡ್ಡು ಬಿಡುಗಡೆ ಮಾಡುತ್ತದೆ ಆದರೆ ಅದು ನಿಜವಾದ ಅರ್ಹ ರೈತರಿಗೆ, ಫಲಾನುಭವಿಗಳಿಗೆ ಸರಿಯಾದ ರೀತಿ ತಲುಪಿಸುವ ಪ್ರತಿಕ್ರಿಯೆ ಕೈಗೊಳ್ಳುತ್ತಿಲ್ಲವೆಂದು, ಅಫಜಲಪುರ ತಾಲೂಕಿನ ಅನೇಕ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಭಾಗಶಃ ಬೆಳೆ ಹಾನಿಯಾದ ಕೆಲವು ರೈತರಿಗೆ ಕಡಿಮೆ ಮೊತ್ತ ಜಮೆಯಾಗಿದ್ದು, ಕಡಿಮೆ ಬೆಳೆ ಹಾನಿ ಮತ್ತು ಹಾನಿಯಾಗದ ಅನೇಕ ರೈತರಿಗೆ ಹೆಚ್ಚಿನ ಮೊತ್ತ ಜಮೆಯಾಗಿರುವುದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದಕ್ಕೆಲ್ಲ ಕಾರಣ ಅವೈಜ್ಞಾನಿಕ ಸರ್ವೇ ಮತ್ತು ಅಧಿಕಾರಿಗಳ ಕರ್ತವ್ಯ ಲೋಪದಿಂದ ಕೆಲವು ಕಡೆ ಈ ರೀತಿ ಸಮಸ್ಯೆಯಾಗಿದೆ ತಾಲೂಕ ದಂಡಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ತಮ್ಮ ಇಲಾಖೆಯೇ ನಿರ್ಲಕ್ಷ್ಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
ವರದಿ ನಾಗರಾಜ್ ಸಿ.ಎಂ.

1 thought on “ಅವೈಜ್ಞಾನಿಕ ಸರ್ವೆ ಮತ್ತು ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ರೈತರು ಆಕ್ರೋಶ

Comments are closed.

error: Content is protected !!