ಯಲ್ಲಾಪುರ ತಾಲೂಕಿನ ಟಿ ಎಸ್ ಎಸ್ ಶಾಖೆಯಲ್ಲಿ ಬಾರಿ ವಂಚನೆ ಪ್ರಕರಣ ಕುರಿತು ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ವಂಚಿತರಾದ ಮಂಜುನಾಥ ನಾಯ್ಕ್ ರವರು ದೂರನ್ನು ದಾಖಲು ಮಾಡಿದ್ದಾರೆ, ಮಂಜುನಾಥ ನಾಯ್ಕ್ ,ಈಶ್ವರ್ ಪಕೀರಪ್ಪ ನಾಯ್ಕ್ ಮತ್ತು ಶ್ರೀಧರ್ ಗಣಪತಿ ಭಟ್ಟ ಇವರು ಯಲ್ಲಾಪುರ ಶಾಖೆಯಲ್ಲಿ ದಿ 22-7-2024 ರಂದು ಅಡಿಕೆಯನ್ನು ಹರಾಜು ಹಾಕಲಾಗಿತ್ತು, ಹರಾಜಿನಲ್ಲಿ ಅಡಿಕೆಯೂ 18,876 ರೂ ಗೆ ಹರಜಾಗಿದ್ದು, ತದ ನಂತರ ಅದನ್ನು 12,899ರು ಗೆ ಬದಲಯಲಾಯಿತು ಎಂದು ಯಲ್ಲಾಪುರ ಠಾಣೆಯಲ್ಲಿ ಟಿ ಎಸ್ ಎಸ್ ಅಧ್ಯಕ್ಷ ಹಾಗೂ ಸಂತೋಷ ವಿ ಭಟ್ ಹಳವಳ್ಳಿ, ಕೃಷ್ಣ ಗಣಪತಿ ಹೆಗ್ಡೆ ಜೂಜಿಬೈಲ್, ಗಿರೀಶ ಚಿದಾನಂದ ಹೆಗ್ಡೆ ಶಿರಸಿ, ರವಿ ಲಕ್ಷ್ಮಿನಾರಾಯಣ ಹೆಗ್ಡೆ ಶಿರಸಿ, ಇಷ್ಟು ಜನರ ಮೇಲೆ ಪ್ರಕರಣ ದಾಖಲಾಗಿದೆ.
ವರದಿ: ಶ್ರೀಪಾದ್ ಎಸ್ ಎಚ್.