ಇಂದು ಉಪೇಂದ್ರರವರ ಹುಟ್ಟಿದ ಹಬ್ಬದ ಪ್ರಯುಕ್ತ ಯುಐ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಆದರೆ ಟೀಸರ್ ನಲ್ಲಿ ಏನು ಸಹ ಕಾಣುವುದಿಲ್ಲ ವಿಭಿನ್ನವಾಗಿ ವಿಚಿತ್ರವಾಗಿ ಟೀಸರ್ ಇದು ಎಲ್ಲವೂ ತಮ್ಮ ಕಲ್ಪನೆಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ಟೀಸರ್ ಕಂಡ ಸಾಕಾಷ್ಟು ಅಭಿಮಾನಿಗಳು ಉಪ್ಪಿ ಯಾವಾಗಲೂ ಡಿಫ್ರೆಂಟ್ ಎಂದು ಹೇಳಿದರೆ ಇನ್ನು ಕೆಲವರು ಏನೋ ಬರಬಹುದು ಎಂದು ಕಾಯುತ್ತಿದ್ದೆವು ಆದರೆ ಇವರು ವಿಚಿತ್ರವಾಗಿ ಏನೋ ಬಿಟ್ಟಿದ್ದಾರೆ ಎಂದು ಬೇಸರವನ್ನು ಸಹ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಟೀಸರ್ ನೋಡಿದವರೆಲ್ಲ ಉಪ್ಪಿ, ಏನೇ ಮಾಡಿದರು ಡಿಫ್ರೆಂಟ್ ಆಗಿ ಮಾಡೋದು ಕನ್ನಡ ಚಿತ್ರರಂಗದಿಂದ ಬರುತ್ತಿರುವ ಮತ್ತೊಂದು ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಚಿತ್ರ ಇದಾಗುತ್ತದೆ ಎಂದು ಹೆಮ್ಮೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಳ್ಳುವ ಮೂಲಕ ಶುಭ ಕೋರಿರುತ್ತಾರೆ.