ಕೊಟ್ಟೂರು:- ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ವೆಂಕಟೇಶ್ವರ ಅಯ್ಯಂಗಾರ್ ಬೇಕರಿಯ ಹಿಂಭಾಗದಲ್ಲಿ ಇಂದು ಸಂಜೆ 7 ಘಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಅವಘಡ ನಡೆದಿದೆ.
ವೆಂಕಟೇಶ್ವರ ಅಯ್ಯಂಗಾರ್ ಬೇಕರಿಯ ಹಿಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನೋಡಿ ಜನರು ಓಡೋಡಿ ಬಂದು ಬೇಕರಿಯವರಿಗೆ ತಿಳಿಸಿದರು.ನಂತರ ಬೇಕರಿಯಲ್ಲಿ ಇದ್ದ ಜನರು ಹೊರಗಡೆ ಬಂದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು.ಧಗಧಗನೆ ಬೆಂಕಿ ಹೊತ್ತಿಕೊಂಡ ಬಳಿಕ ದಟ್ಟ ಹೊಗೆ ಆವರಿಸಿಕೊಂಡಿತು.ಬೆಂಕಿ ಹತ್ತಿಕೊಂಡ ವಿಷಯ ತಿಳಿದ ಅಕ್ಕ ಪಕ್ಕದ ಅಂಗಡಿಯವರು ಹಾಗೂ ನಿವಾಸಿಗಳು ಹೊರಗಡೆ ಬಂದು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ.ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಬಂದು ಬೆಂಕಿ ನಂದಿಸಿತು.ಬೇಕರಿಯ ಪಕ್ಕದಲ್ಲಿರುವ ಮೊಬೈಲ್ ಶಾಪ್ ಹಾಗೂ ಬಳೆ ಅಂಗಡಿಯ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟಿರುವುದು ಎಂದು ತಿಳಿದು ಬಂದಿದೆ.ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಘಟನೆ ನಡೆದ ಸ್ಥಳಕ್ಕೆ ಪಿಎಸ್ಐ ಗೀತಾಂಜಲಿ ಶಿಂಧೆ,ಅಗ್ನಿ ಶಾಮಕ ದಳದ ಸಿಬ್ಬಂದಿ ವರ್ಗದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ವರದಿ:- ಮಣಿಕಂಠ. ಬಿ