Latest

ಗಾಂಧಿ ವೃತ್ತದ ಮೆಡಿಕಲ್ ಅಂಗಡಿಯಲ್ಲಿ ಬೆಂಕಿ ಅವಘಡ – ಲಕ್ಷಾಂತರ ರೂ. ನಷ್ಟ

ಪಟ್ಟಣದ ಗಾಂಧಿ ವೃತ್ತದಲ್ಲಿರುವ ಮೆಡಿಕಲ್ ಅಂಗಡಿಯಲ್ಲಿ ಶುಕ್ರವಾರ (ಏಪ್ರಿಲ್ 12) ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕಿಟ್‌ನಿಂದ ಭಾರಿ ಅಗ್ನಿ ಅವಘಡ ನಡೆದಿದೆ. ಈ ವೇಳೆ ಅಂಗಡಿಯಲ್ಲಿ ಸಂಗ್ರಹಿಸಿದ್ದ ಔಷಧಿಗಳು, ನಗದು ಹಾಗೂ ಇತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ರಾತ್ರಿ ಸುಮಾರು 1 ಗಂಟೆಗೆ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ದಟ್ಟ ಹೊಗೆಯನ್ನು ಗಮನಿಸಿ ತಕ್ಷಣ ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದರು. ಆದರೆ, ಇತರರು ಬಕೆಟ್ ನೀರಿನಿಂದ ಬೆಂಕಿಯನ್ನು ನಂದಿಸಲು ಯತ್ನಿಸಿದರೂ ಆಗಲೇ ಬೆಂಕಿ ವ್ಯಾಪಕವಾಗಿ ಹರಡಿತ್ತು.

ಘಟನೆ ಸಂಭವಿಸಿದ ಸಂದರ್ಭದಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದ ಕಾರಣ ಅಂಗಡಿಯೊಳಗಿನ ಎಲ್ಲಾ ವಸ್ತುಗಳು ಕೆಲವೇ ನಿಮಿಷಗಳಲ್ಲಿ ಸುಟ್ಟು ಹೋಗಿ ನಾಶವಾದವು. ಆದರೆ, ನೆರೆಯ ಅಂಗಡಿ ಮಾಲಿಕರು ಸಹಕಾರ ನೀಡಿದ್ದು, ತಮ್ಮ ಅಂಗಡಿಗಳಲ್ಲಿದ್ದ ವಸ್ತುಗಳನ್ನು ತಕ್ಷಣವೇ ಹೊರತೆಗೆದ ಕಾರಣ ಹೆಚ್ಚಿನ ಅನಾಹುತ ತಪ್ಪಿದಂತಾಯಿತು.

ಸುದ್ದೆ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತಂದರು. ಆದರೆ ಆಗಾಗಲೇ ಮೆಡಿಕಲ್ ಅಂಗಡಿಯೊಳಗಿನ ಔಷಧಿ, ನಗದು ಹಣ, ಫ್ರೀಜ್‌ಗಳು, ಮೆಜ್, ಕೂರಿ ಸೇರಿದಂತೆ ಎಲ್ಲವೂ ಭಸ್ಮವಾಗಿತ್ತು.

ಪ್ರಾಥಮಿಕ ಮಾಹಿತಿಯಂತೆ, ಸುಮಾರು ಐದುರಿಂದ ಆರು ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿರುವ ಸಾಧ್ಯತೆ ಇದೆ. ಘಟನೆ ಸಂಬಂಧ ತನಿಖೆ ಮುಂದುವರಿದಿದೆ.

nazeer ahamad

Recent Posts

ಬಿಸಿಎ ವಿದ್ಯಾರ್ಥಿನಿ ಆತ್ಮಹತ್ಯೆ: ಹಾಸ್ಟೆಲ್ ಕೊಠಡಿಯಲ್ಲಿ ದುರ್ಘಟನೆ

ಬೆಳಗಾವಿಯ ಮಹಾಂತೇಶ್ ನಗರದ ಸಮಾಜ ಕಲ್ಯಾಣ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಬಿಸಿಎ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ…

46 minutes ago

ಭೋಪಾಲ್‌ ಆಸ್ಪತ್ರೆಯಲ್ಲಿ ಅದ್ಭುತ ಘಟನೆ: ಮಹಿಳೆಯಿಂದ ಏಕಕಾಲದಲ್ಲಿ ನಾಲ್ಕು ಶಿಶುಗಳಿಗೆ ಜನ್ಮ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಕೈಲಾಶ್‌ನಾಥ್ ಕಟ್ಜು ಆಸ್ಪತ್ರೆಯಲ್ಲಿ ಅಪರೂಪದ ಘಟನೆೊಂದು ನಡೆದಿದೆ. ಅಲ್ಲಿನ ಮಹಿಳೆಯೊಬ್ಬರು ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ…

52 minutes ago

ಪತ್ನಿಯ ದೂರು ಭೀತಿಯಿಂದ ಪೊಲೀಸ್ ಠಾಣೆ ಎದುರು ಪತಿಯ ಆತ್ಮಹತ್ಯೆ ಯತ್ನ

ಮಧ್ಯಪ್ರದೇಶದ:  ಭೋಪಾಲ್‌ನ ಗೌತಮ್ ನಗರ ಪೊಲೀಸ್ ಠಾಣೆಯ ಬಳಿ ಶುಕ್ರವಾರ ಭಯಾನಕ ಘಟನೆ ನಡೆದಿದೆ. ತನ್ನ ಪತ್ನಿ ಪೊಲೀಸರಿಗೆ ದೂರು…

1 hour ago

ಬಿಹಾರದಿಂದ ಗಾಂಜಾ ಕಳ್ಳವ್ಯವಹಾರ: ₹3 ಲಕ್ಷ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡ ಪೊಲೀಸರು

ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಬಿಹಾರದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.…

2 hours ago

ಉಮಾಪತಿ ಭಾಷಣದಲ್ಲಿ ದರ್ಶನ್ ವಿರುದ್ಧ ಮತ್ತೊಮ್ಮೆ ಕಿಡಿಕಾರಿಕೆ..

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲಿನಲ್ಲಿ ಇದ್ದ ಹಿನ್ನೆಲೆಯಲ್ಲಿ, ಈಗ ಅವರ ಹೆಸರು ಮರುಮತ್ತೆ ಸುದ್ದಿಗೆ…

4 hours ago

ಒಂದುವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ : ಪ್ರೇಯಸಿಯ ನಿರಾಕರಣೆಗೆ ಕ್ರೂರ ಪ್ರತೀಕಾರ”

ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಜನಮಾನಸವನ್ನು ನಡುಗಿಸುವಂತೆ ಭಯಾನಕ ಘಟನೆ ನಡೆದಿದೆ. ತನ್ನ ಪ್ರೇಯಸಿ ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ ಆಕ್ರೋಶದಿಂದ ಒಡಿಶಾದ…

4 hours ago