ಬಾಗಲಕೋಟೆ: ತಾಲೂಕಿನ ಆಹಾರ ಇಲಾಖೆಯ ನಿರೀಕ್ಷಕ ಹಾಗೂ ಇನ್ನೋರ್ವ ವ್ಯಕ್ತಿ ಸೇರಿದಂತೆ ಮಂಗಳವಾರ ರಾತ್ರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಫುಡ್ ಆಫೀಸರ್ ವೀರಯ್ಯ ಕೋಟಿ ಹಾಗೂ ಮಲ್ಲಿಕಾರ್ಜುನ ಹಾವರಗಿ ಎಂಬ ಅಧಿಕಾರಿಗಳು 60 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಸಿಕ್ಕಿದ್ದಾರೆ. ವಿದ್ಯಾಗಿರಿಯ 8 ನೇ ಕ್ರಾಸ್ ನಲ್ಲಿರುವ ನ್ಯಾಯ ಬೆಲೆ ಅಂಗಡಿಯ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರದ್ದಾದ ರೇಶನ್ ಅಂಗಡಿಯನ್ನು ಮತ್ತೆ ಪ್ರಾರಂಭಿಸಲು ಅನುಮತಿಗಾಗಿ ಸುರೇಶ ಅಂಗಡಿಯವರಿಂದ 60 ಸಾವಿರ ರೂಪಾಯಿ ಪಡೆಯುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಸಿಪಿಐ ಬಿದರಿಯವರ ನೇತೃತ್ವದಲ್ಲಿ ದಾಳಿ ನಡೆಸಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ವರದಿ: ವಿಶ್ವನಾಥ ಭಜಂತ್ರಿ