ಕೊಟ್ಟೂರು:- ಭಾರತೀಯ ಜನತಾ ಪಕ್ಷದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀನಾ ಮಂಜುನಾಥ ರವರು ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆಂದು ಹೇಳಿದರು.ಭಾರತೀಯ ಜನತಾ ಪಕ್ಷದ ಪ್ರಧಾನಿ ನೇತೃತ್ವದಲ್ಲಿ ದೇಶದಲ್ಲಿ ಹಲವಾರು ಜನಪರ ಯೋಜನೆಗಳು ಜಾರಿಗೆ ತಂದಿದ್ದು ಅವುಗಳ ಅನುಷ್ಠಾನ ಪ್ರಗತಿಪರ ಸಾಧನೆಗಳಿಂದ ದೇಶದ ಅಭಿವೃದ್ಧಿಯಾಗಿದ್ದು, ಈ ಬಾರಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಕ್ಕರೆ ಈ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರ ಜೊತೆಗೂಡಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಹಿಂದೆ ನನ್ನ ಅಧಿಕಾರಾವಧಿಯಲ್ಲಿ ಜಿಲ್ಲೆಯ ಹಲವಾರು ಅಭಿವೃದ್ಧಿ ಕೆಲಸವನ್ನು ಮಾಡಿ ಜನರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇನೆ.ವಿಶೇಷವಾಗಿ ಉದ್ಯೋಗಗಳಾಗಳಿ,ಕುಡಿಯುವ ನೀರಿನ ವ್ಯವಸ್ಥೆ,ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಲಿ ಇನ್ನೂ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿ ಯಶಸ್ವಿಯಾಗಿದ್ದೇನೆ ಹಾಗೂ ರಾಜಕೀಯವಾಗಿ ನಿರಂತರ ಕ್ಷೇತ್ರದ ಜನತೆ ಸಂಪರ್ಕದಲ್ಲಿದ್ದು ಎಲ್ಲಾ ಸಮುದಾಯದ ಜನರ ಪ್ರೀತಿ ವಿಶ್ವಾಸವನ್ನು ತೆಗೆದುಕೊಂಡಿದ್ದೇನೆ ಆದ್ದರಿಂದಾಗಿ ಎಸ್ಸಿ ಮೀಸಲು ಕ್ಷೇತ್ರವಿರುವ ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಕಾರ್ಯಕರ್ತರ ಒತ್ತಡ ಹಾಗೂ ಮೀಸಲು ಕ್ಷೇತ್ರ ಆಗಿ 15 ವರ್ಷ ಕಳೆದರೂ ನಿಜವಾದ ಅಸ್ಪೃಶ್ಯ ಸಮುದಾಯವು ಇಲ್ಲಿ ರಾಜಕೀಯವಾಗಿ ಬೆಳೆಯದೆ ಇರುವುದು ನನಗೆ ನೋವಿದೆ.ಈ ಕಾರಣದಿಂದ ಭಾರತೀಯ ಜನತಾ ಪಕ್ಷದ ರಾಜ್ಯ ಹಿರಿಯ ಮುಖಂಡರ ಗಮನವನ್ನು ಸೆಳೆದಿದ್ದೇನೆ.ಹೈಕಮಾಂಡ್ ಟಿಕೆಟ್ ನೀಡಿದ್ದೆ ಆದರೆ ಕ್ಷೇತ್ರ ಓಡಾಟ ನಡೆಸಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ತಂದು ಕೊಡಲು ಶ್ರಮ ವಹಿಸಿ ಕೆಲಸ ಮಾಡುತ್ತೇನೆ ಹಾಗೂ ಮಹಿಳೆಯರು ಕೂಡ ವ್ಯವಸ್ಥೆಯನ್ನು ಬದಲಾಯಿಸ ಬಲ್ಲರು ಅಂದುಕೊಳ್ಳುವಂತೆ ಖಂಡಿತ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಲು ಸತತವಾಗಿ ಪರಯತ್ನಿಸುತ್ತೇನೆಂದು ಹೇಳಿದರು.

error: Content is protected !!