ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಜಿ. ದೇವರಾಜ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಆರೋಪ ಕೇಳಿಬಂದಿದ್ದು, ಭರಮಸಾಗರ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಆದೇಶ
ಶನಿವಾರ ತಡರಾತ್ರಿ ದೇವರಾಜ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತ್ತಾದರೂ, ಚಿತ್ರದುರ್ಗದ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಂಗಾಧರ ಬಡಿಗೇರ ಅವರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿದರು.
ಆರೋಪಗಳ ವಿವರ
ಸಂತ್ರಸ್ತ ಮಹಿಳೆಯರ ದೂರಿನ ಪ್ರಕಾರ, ದೇವರಾಜ್ ಅವರು ಪದೇಪದೇ ಲೆಕ್ಕಪತ್ರ ನೀಡುವಂತೆ ಒತ್ತಾಯಿಸುತ್ತಾ, ಮೈಮುಟ್ಟಲು ಹಾಗೂ ಪಕ್ಕದಲ್ಲಿ ಕುಳಿತುಕೊಳ್ಳಲು ಯತ್ನಿಸುತ್ತಿದ್ದರು. ಅಲ್ಲದೆ, ಸಾರ್ವಜನಿಕ ಸಮ್ಮುಖದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.
ಇದೇ ವೇಳೆ, ದ್ವಿತೀಯ ದರ್ಜೆ ಸಹಾಯಕ (SDA) ಜಯರಾಮ ಅವರ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪವೂ ದೇವರಾಜ್ ಮೇಲೆ ಕೇಳಿಬಂದಿದ್ದು, ಈ ಸಂಬಂಧ ಭರಮಸಾಗರ ವೃತ್ತ ನಿರೀಕ್ಷಕ ಪಿ. ಪ್ರಸಾದ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದೆ.
ಕನ್ನಡದ ವಜ್ರಕಾಯ ನಟಿ ನಭಾ ನಟೇಶ್ ಸದಾ ತನ್ನ ಫೋಟೋಶೂಟ್‌ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಈ…
ಗೇಮಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಪ್ರೇಮ ಸಂಬಂಧ ಬೆಳೆಸಿ, ಗಂಡನನ್ನು ತೊರೆದು ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಇದೀಗ…
ಲೋಕಾಯುಕ್ತ ಅಧಿಕಾರಿ ಎಂದು ಭ್ರಮೆ ಹುಟ್ಟುಸಿ ಮಹಿಳಾ ಅಧಿಕಾರಿಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದ 8ನೇ ತರಗತಿ ಓದಿದ ವಂಚಕನ ಕೀಳರಿಮೆ ಕೊನೆಗೊಂಡಿದೆ.…
ಬೆಳಗಾವಿಯಲ್ಲಿ ಗಂಡನ ಮೋಸದೊಂದು ಪ್ರಕರಣ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಸುಳದಾಳ ಗ್ರಾಮದ ಯಲ್ಲಪ್ಪ ಮುಸಲ್ಮಾರಿ, ಮನೆಯವರ ವಿರೋಧದ ನಡುವೆಯೇ…
ಮುಂಡಗೋಡ ಇಂದು ಮುಂಡಗೋಡಿನಲ್ಲಿ ಖಾಸಗಿ ಬಜಾಜ್ ಕಂಪನಿಯ ಶಾಖೆಯು ಉದ್ಘಾಟನೆಯಾಗಿದ್ದು ಈ ಯಾಕೆ ಇನ್ನು ಮುಂಡಗೋಡದ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ…
ಪಟಿಯಾಲಾದಲ್ಲಿ ಹಿರಿಯ ಸೇನಾ ಅಧಿಕಾರಿ ಪುಷ್ಪಿಂದರ್ ಸಿಂಗ್ ಬಾತ್ ಮತ್ತು ಅವರ ಮಗ ಅಂಗದ್ ಸಿಂಗ್ ಮೇಲೆ ಮೂವರು ಪಂಜಾಬ್…