ಕಡೂರು ತಾಲೂಕ್ಕಿನ ಬೀರೂರು ಹೋಬಳಿಯ. ಉಲಿನಾಗರು ಗ್ರಾಮದ ಸರ್ವೇ ನಂಬರ್ 43 ರಲ್ಲಿ 5.04 ಎಕರೆ ಸರ್ಕಾರಿ ಬೀಳು ಜಮೀನನ್ನು ಖಾಸಗಿ ವೆಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊತ್ತಿರುವ ತಶೀಲ್ದಾರ್ ಉಮೇಶ್ ಸೇರಿ 4 ಜನ ಅಧಿಕಾರಿಗಳ ಮೇಲೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ದಂತೆ ತರೀಕೆರೆ ಉಪವಿಬಾಧಿಕಾರಿ ಕಾಂತರಾಜ್ ಅವರು ಕಡೂರು ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.
ಸರ್ಕಾರಿ ಬಿಳು ಜಮೀನ್ ಅನ್ನು ಅಕ್ರಮವಾಗಿ ಖಾತೆ ಮಾಡಿಕೊಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ತಶೀಲ್ದಾರ್ ಉಮೇಶ್ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡಿ ಅಕ್ರಮವಾಗಿ ಖಾತೆ ಮಾಡಿರುವ ಬಗ್ಗೆ ತನಿಖೆ ಮಾಡಲು ಸರ್ಕಾರ 15 ಜನಗಳ ತಶೀಲ್ದಾರ್ ತಾಂಡ ರಚನೆ ಮಾಡಿ ಕಡೂರು ತಾಲ್ಲೂಕ್ಕಿಗೆ ಕಳುಹಿಸಿದ್ದಾರೆ.
5.04 ಎಕರೆ ಜಮೀನು 4 ಜನರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ.
ತಶೀಲ್ದಾರ್ ಉಮೇಶ್, ಶಿರಸ್ತೆದಾರ, ನಂಜುಂಡಪ್ಪ ಮತ್ತು ಬಸವರಾಜ್ ವಿರುದ್ದ ಕ್ರಿಮಿನಲ್ ಕೇಸ್ ತರೀಕೆರೆ AC ಕಾಂತರಾಜ್ ಕಡೂರು ಪೊಲೀಸ್ ಠಾಣೆಗೆ ಕೇಸ್ ದಾಖಲು ಮಾಡಿದ್ದಾರೆ ಸದ್ಯಕ್ಕೆ ಕಡೂರು ತಶೀಲ್ದಾರ್ ಉಮೇಶ್ ವರ್ಗಾವಣೆ ಅಗಿ ಕಾರವಾರದಲ್ಲಿ ಭೂಮಿ ವಿಭಾಗದಲ್ಲಿ ಉಪವಿಬಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

error: Content is protected !!