ಶಿರಸಿ; ಮನೆಯೊಳಗಿದ್ದ ಲಕ್ಷಾಂತರ ರೂಪಾಯಿ ನಗದು ಹಾಗೂ ಬಂಗಾರದ ಆಭರಣ ಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬನವಾಸಿ ಪೋಲಿಸರು ಬಂಧಿಸಿದ್ದಾರೆ.
ಶಿರಗೋಡದ ಮಹಮ್ಮದ್ ಕೈಫ್ ಮಹಮ್ಮದ್ ಗೌಸ್ (೧೯ ), ಬನವಾಸಿ ಯ ವಿಶ್ವ ಮಹೇಶ ಪಾವಸ್ಕರ, (೨೧), ಬನವಾಸಿ ಕಡಗೋಡದ, ಯಾಸೀನ್ ಬಾಷಾಸಾಬ್ (೧೮) ಹಾಗೂ ಹೊಸಪೇಟೆ ರಸ್ತೆ ಬನವಾಸಿಯ, ರಿಯಾಜ್ ತಂದೆ ಇಕ್ಬಾಲ್ ಚೌಧರಿತ (೧೯) ಆರೋಪಿಗಳಾಗಿದ್ದಾರೆ. ಆರೋಪಿಗಳು ಸ.೭ರಂದು ಬನವಾಸಿ ಯ ಖಲೀಲ ಅಬ್ದುಲ್ ಅಜೀಂ ಶೇಖ್ ಎಂಬಾತರ ಮನೆಯ ಒಳಗಡೆ ನುಗ್ಗಿ ಸುಮಾರು ೨,೫೫,೦೦೦ ರೂ, ನಗದು ಹಣ ಹಾಗೂ ಸುಮಾರು ೪ ಗ್ರಾಂ ತೂಕದ ಬಂಗಾರದ ನಮೂನೆಯ ಸಣ್ಣ ಉಂಗುರುಗಳು ೪.೦೦೦=೦೦ ರೂ, ಬೆಲೆಯವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಗಿಳಿದ ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಮೊದಲನೇ ಆರೋಪಿಯಾದ ಮಹಮ್ಮದ್ ಕೈಫ್ ಮಹಮ್ಮದ್ ಗೌಸ್ ಈತನು ಪೆ.೧೬ರಂದು ಬನವಾಸಿ ಯ ಸುಮರ್ಣಾ ಮಾಲತೇಶ ಎಂಬಾತರ ಮನೆಯನ್ನು ಕಳ್ಳತನ ಮಾಡಿದ್ದನ್ನೂ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಪೋಲಿಸ್ ತನಿಖೆ ಯಿಂದ ಎರಡು ಪ್ರಕರಣಕ್ಕೆ ಸಂಬಂಧಿಸಿ ಒಟ್ಟು-೨,೭೫,೦೦೦ ನಗದು ಹಾಗೂ ೧೦ ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆ ಯಲ್ಲಿ ಡಿವೈಎಸ್ಪಿ ರವಿನಾಯ್ಕ ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನ ದಲ್ಲಿ ಬನವಾಸಿ ಠಾಣೆ ಪಿಎಸ್ಐ ಗಳಾದ ಹನುಮಂತ ಬೀರಾದಾರ, ಚಂದ್ರಕಲಾ ಪತ್ತಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು