ಮೈಸೂರಿನ ಕುವೆಂಪುನಗರದ ಸರ್ವಿಸ್ ಅಪಾರ್ಟ್ಮೆಂಟ್‌ವೊಂದರಲ್ಲಿ ಮೂರು ಜನ ಆಸಾಮಿಗಳು ಸೈಟ್‌ಗಳು ಮತ್ತು ಜಮೀನುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರನ್ನು ವಂಚಿಸಿ ಮೋಸದಿಂದ ಅಕ್ರಮ ಲಾಭ ಮಾಡಿ ಕೊಳ್ಳುತ್ತಿರುವುದಾಗಿ ಮೈಸೂರು ನಗರದ ಡಿ.ಸಿ.ಪಿ. ಕಾನೂನು ಮತ್ತು ಸುವ್ಯವಸ್ಥೆ ರವರಾದ ಶ್ರೀ ಪ್ರದೀಪ್ ಗುಂಟಿ, ಐಪಿಎಸ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಈ ಆರೋಪಿಗಳ ಪತ್ತೆ ಸಂಬಂಧ ಡಿ.ಸಿ.ಪಿ.ರವರು ವಿಶೇಷ ತಂಡವನ್ನು ರಚನೆ ಮಾಡಿ ಮೈಸೂರುನಗರದ ಕುವೆಂಪುನಗರ ಪೊಲೀಸ್ ಠಾಣಾ ಸರಹದ್ದಿನ ರಾಮಕೃಷ್ಣನಗರ ಐ ಬ್ಲಾಕ್‌ನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಗೋಲ್ಡನ್ ಬೆಲ್ಸ್ ಸರ್ವೀಸ್ ಅರ್ಪಾಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ರೂಂ ನಂ: ೩೦೧ ಸ್ಥಳದ ಮೇಲೆ ದಿನಾಂಕ: ೦೫/೦೯/೨೦೨೨ ರಂದು ದಾಳಿ ಮಾಡಿ ಪರಿಶೀಲಿಸಿದ್ದು, ಮೂವರು ಆರೋಪಿಗಳು ಸೈಟ್‌ಗಳು ಮತ್ತು ಜಮೀನುಗಳ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ಕೃತ್ಯದಲ್ಲಿ ತೊಡಗಿರುವುದು ಕಂಡು ಬಂದ ಮೇರೆಗೆ ಮೂರು ಜನ ಆರೋಪಿಗಳನ್ನು ಬಂಧಿಸಿ, ಅವರುಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್‌ಟಾಪ್, ಪ್ರಿಂಟರ್, ಸ್ಕಾö್ಯನರ್‌ಗಳು, ಮೊಬೈಲ್‌ಗಳು ಹಾಗೂ ವಿವಿಧ ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳಿಗೆ ಸೇರಿದ ನಕಲಿ ಸೀಲ್‌ಗಳು, ಅಧಿಕಾರಿಗಳ ನಕಲಿ ಸೀಲ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂದ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
ಈ ಪತ್ತೆ ಕಾರ್ಯವನ್ನು ಡಿ.ಸಿ.ಪಿ., ಕಾನೂನು ಮತ್ತು ಸುವ್ಯವಸ್ಥೆ ರವರಾದ ಶ್ರೀ ಪ್ರದೀಪ್ ಗುಂಟಿ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಕೃಷ್ಣರಾಜ ವಿಭಾಗದ ಎ.ಸಿ.ಪಿ.ರವರಾದ ಶ್ರೀ ಗಂಗಾಧರಸ್ವಾಮಿ ಎಸ್.ಇ ರವರ ಉಸ್ತುವಾರಿಯಲ್ಲಿ, ಕುವೆಂಪುನಗರ ಪೊಲೀಸ್ ಠಾಣೆಯ ಪಿ.ಐ ರವರಾದ ಶ್ರೀ ಷಣ್ಮುಗ ವರ್ಮ ಕೆ, ಪಿಎಸ್‌ಐ ರವರಾದ ಕು.ರಾಧ ಎಂ, ಶ್ರೀ ಗೋಪಾಲ್, ಎಸ್ ಪಿ, ಪ್ರೊ.ಪಿಎಸ್‌ಐ ಶ್ರೀ ಪ್ರಭು ಹಾಗೂ ಎ.ಎಸ್.ಐಮುರಳೀಗೌಡ ಸಿಬ್ಬಂದಿಯವರಾದ ಪುರುಷೋತ್ತಮ್, ಕೃಷ್ಣ ಮಂಜುನಾಥ್ ಕೆ.ಎನ್., ರಾಜುಸಾಬ್, ಮೌನೇಶ, ಅಮೋಘ್, ಪುಟ್ಟಪ್ಪ ಎನ್‌ಕೆ, ಹಜರತ್ ಅಲಿ, ಮಹೇಶ್.ಎಂ, ಯೋಗೇಶ, ರವರು ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.