Latest

ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರಿನಲ್ಲಿ ವಂಚನೆ: ಸಿಡಿಆರ್‌ ಡೇಟಾ ಮಾರಾಟ ಮಾಡುತ್ತಿದ್ದ ಐಶ್ವರ್ಯಗೌಡ ಸೇರಿದಂತೆ ಇಬ್ಬರು ಬಂಧನ

ಮಾಜಿ ಸಂಸದ ಡಿ.ಕೆ. ಸುರೇಶ್‌ ಹೆಸರು ಬಳಸಿ ಜ್ಯುವೆಲ್ಲರಿ ಶಾಪ್ ಮಾಲಕರು ಹಾಗೂ ಉದ್ಯಮಿಗಳನ್ನು ವಂಚಿಸಿದ್ದ ಐಶ್ವರ್ಯಗೌಡ ಪ್ರಕರಣದಲ್ಲಿ ಹೊಸ ಸಂಗತಿ ಬೆಳಕಿಗೆ ಬಂದಿದೆ. ಮೊಬೈಲ್‌ ಕರೆ ವಿವರ (CDR) ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಅಕ್ಕೂರು ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸುನೀಲ್ (36) ಹಾಗೂ ಐಶ್ವರ್ಯಗೌಡನ ಆಪ್ತ ಪವನ್ (34) ಅವರನ್ನು ಬಂಧಿಸಿದ್ದಾರೆ.

ಸಿಡಿಆರ್‌ ಡೇಟಾ ಲೀಕ್‌: ಪೊಲೀಸರು ಕೈಗೆತ್ತಿಕೊಂಡ ಕಾನೂನು ಕ್ರಮ

  • ಐಶ್ವರ್ಯಗೌಡ ಸುಮಾರು 6-7 ಜನರ ಮೊಬೈಲ್‌ ಸಿಡಿಆರ್‌ ಡೇಟಾ ಸಂಗ್ರಹಿಸಿದ್ದಾಳೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
  • ಹೆಚ್ಚಿನ ಮಾಹಿತಿ ಪಡೆಯಲು ಇಬ್ಬರನ್ನೂ 6 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
  • ಈ ಹಿಂದೆ ಐಶ್ವರ್ಯಗೌಡ, ಆಕೆಯ ಪತಿ ಹಾಗೂ ಇತರರ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
  • ಆ ತನಿಖೆ ವೇಳೆ ಪೊಲೀಸರು ಐಶ್ವರ್ಯಗೌಡನ ಐಫೋನ್ ಪರಿಶೀಲಿಸಿದಾಗ, ನಾಲ್ಕು ಜನರ CDR ಡೇಟಾ ಇದ್ದು, ಇದು ಹೆಡ್‌ ಕಾನ್‌ಸ್ಟೇಬಲ್‌ ಸುನೀಲ್ ಮೂಲಕ ಲಭ್ಯವಾಗಿದ್ದ ಬಗ್ಗೆ ಮಾಹಿತಿ ಲಭ್ಯವಾಯಿತು.

ಪ್ರತಿ ಸಿಡಿಆರ್‌ಗೆ ₹40,000 ಸಂಗ್ರಹ!

  • ಐಶ್ವರ್ಯಗೌಡನ ಆಪ್ತ ಪವನ್‌ ಮತ್ತು ಹೆಡ್‌ಕಾನ್‌ಸ್ಟೇಬಲ್‌ ಸುನೀಲ್‌ ಒಟ್ಟಿಗೆ ಸಿಡಿಆರ್‌ ಡೇಟಾ ಮಾರಾಟ ಮಾಡುತ್ತಿದ್ದರು.
  • ಸ್ತ್ರೀರೋಗ ತಜ್ಞೆ ಮಂಜುಳಾ ಪಾಟೀಲ್, ನಂದಿನಿ ಪುಟ್ಟೇಗೌಡ, ಖುಷ್ಮಿತಾ ಹಾಗೂ ರೀ ಎಂಬವರ CDR ಡೇಟಾ 2021ರಿಂದ 2024ರ ವರೆಗೆ ಸುನೀಲ್ ನೀಡಿದ್ದಾನೆ.
  • ಪ್ರತಿ ಸಿಡಿಆರ್‌ಗೆ ಕನಿಷ್ಠ ₹30,000 – ₹40,000 ವಸೂಲಿ ಮಾಡಲಾಗುತ್ತಿತ್ತು.

ಇಬ್ಬರ ವಿಚಾರಣೆ ಮುಂದುವರಿದಿದ್ದು, ಸಿಡಿಆರ್‌ ಡೇಟಾ ದುರುಪಯೋಗ ಮಾಡಿದ್ದ ಮತ್ತಷ್ಟು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

18 ಕೋಟಿ ರೂಪಾಯಿಗೆ ಕನ್ಯತ್ವ ಹರಾಜು: ವಿವಾದಕ್ಕೆ ಕಾರಣವಾದ ವಿದ್ಯಾರ್ಥಿನಿಯ ನಿರ್ಧಾರ

ಲಂಡನ್‌ನ 22 ವರ್ಷದ ವಿದ್ಯಾರ್ಥಿನಿ ತನ್ನ ಕನ್ಯತ್ವವನ್ನು ಆನ್‌ಲೈನ್ ಹರಾಜಿನಲ್ಲಿ ಮಾರಾಟ ಮಾಡಿ, ಹಾಲಿವುಡ್ ನಟನಿಂದ 18 ಕೋಟಿ ರೂಪಾಯಿಗೆ…

47 minutes ago

ರಾಟ್‌ವೀಲರ್ ಹಾಗೂ ನಾಗರಹಾವಿನ ನಡುವೆ ಭೀಕರ ಹೋರಾಟ: ವಿಡಿಯೋ ವೈರಲ್!

ಬೇಸಿಗೆ ಆರಂಭವಾದ್ದರಿಂದ ಹಾವುಗಳು ತಮ್ಮ ಹುತ್ತಗಳನ್ನು ತೊರೆದು ತಂಪು ಪ್ರದೇಶಗಳತ್ತ ಸಾಗುತ್ತವೆ. ಇತ್ತೀಚೆಗೆ, ಒಂದು ಇಂತಹ ಘಟನೆ ಮನರಂಜನೆಯ ಜೊತೆಗೆ…

2 hours ago

ಟಾಟಾ ಪಂಚ್ ನಜ್ಜುಗುಜ್ಜಾದರೂ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾದದ್ದು ಅದೃಷ್ಟ!

ಮಹಾರಾಷ್ಟ್ರದ ಥಾಣೆಯ ಕ್ಯಾಡ್ಬರಿ ಬ್ರಿಡ್ಜ್ ಫ್ಲೈಓವರ್‌ನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಡಂಪರ್ ಟ್ರಕ್, ಟ್ರೈಲರ್ ಮತ್ತು ಟೆಂಪೊ ನಡುವೆ…

2 hours ago

ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಪತ್ನಿ: ತನಿಖೆಯಲ್ಲಿ ಸತ್ಯ ಬಹಿರಂಗ

ಸತ್ಯ ಎಂದರೆ ಬೂದಿ ಮುಚ್ಚಿದ ಕೆಂಡದಂತೆ, ಸುಳ್ಳಿನ ಪರದೆ ಸರಿದರೆ ಅದೊಂದು ದಿನ ಹೊರಬರುತ್ತದೆ ಎನ್ನುವ ಮಾತಿಗೆ ತೆಲಂಗಾಣದ ನಲ್ಗೊಂಡದಲ್ಲಿ…

2 hours ago

ಡೊಮಿನಿಕನ್ ಗಣರಾಜ್ಯದಲ್ಲಿ ನಾಪತ್ತೆಯಾದ ಭಾರತೀಯ ಮೂಲದ ವಿದ್ಯಾರ್ಥಿನಿ: ತನಿಖೆಯಲ್ಲಿ ಹೊಸ ತಿರುವು

ಡೊಮಿನಿಕನ್ ಗಣರಾಜ್ಯದಲ್ಲಿ ಬೇಸಿಗೆ ರಜೆ ಕಳೆದ ವೇಳೆ ನಿಗೂಢವಾಗಿ ಕಾಣೆಯಾಗಿದ್ದ 20 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸುದೀಕ್ಷಾ…

2 hours ago

“ಭಾರತದಲ್ಲಿ ಮೆಚ್ಚಿದ ಅನುಭವ – ‘ಅಮೆರಿಕದಲ್ಲೂ ಇವೆಲ್ಲಾ ಇರಬೇಕಿತ್ತು’ ಎಂದ ಅಮೆರಿಕಾದ ಮಹಿಳೆ ಕ್ರಿಸ್ಟನ್ ಫಿಷರ್”

ನಾಲ್ಕು ವರ್ಷಗಳ ಹಿಂದೆ ಅಮೆರಿಕ (USA) ತೊರೆದು ಭಾರತ (India) ಗೆ ಸ್ಥಳಾಂತರಗೊಂಡ ಕ್ರಿಸ್ಟನ್ ಫಿಷರ್, ಈಗ ಭಾರತದ ಸಂಸ್ಕೃತಿ,…

2 hours ago