ಬಿ.ಬಿ.ಎಂ.ಪಿ ನೂರಾರು ಕೋಟಿ ಖರ್ಚು ಮಾಡಿ ಕಟ್ಟಿರುವ ಫ್ರೀಡಂ ಪಾರ್ಕ್ ನ ಶೌಚಾಲಯಗಳು ಗಬ್ಬು ನಾರುವ ಹಾಗೂ ಹಲವು ಕಾಯಿಲೆಗಳನ್ನು ಹರಡುವ ಶೌಚಾಲಯಗಳಾಗಿವೆ. ದಿನ ನಿತ್ಯ ಸಾವಿರಾರು ಜನ ಇಲ್ಲಿಗೆ ಧರಣಿ ಮಾಡಲು, ವಾಕಿಂಗ್ ಮಾಡಲು, ಫ್ರೀಡಂ ಪಾರ್ಕ್ ನೋಡಲು ಬರುತ್ತಾರೆ ಆದರೆ ಅಂಥವರಿಗೆ ಸರಿಯಾದ ರೀತಿಯ ಶೌಚಾಲಯಗಳಿಲ್ಲ. ಸಾವಿರಾರು ಜನ ಬರುವ ಸ್ಥಳದಲ್ಲಿ ಸರಿಯಾದ ರೀತಿಯ ಶೌಚಾಲಯಗಳಿಲ್ಲ ಎಂದರೆ ಮೂತ್ರ ವಿಸರ್ಜನೆ ಮಾಡ ಬಯಸುವವರು ಎಲ್ಲಿಗೆ ಹೋಗಬೇಕು? ಫ್ರೀಡಂ ಪಾರ್ಕ್ ನಲ್ಲಿ ನಿರ್ಮಾಣವಾಗಿರುವಂತಹ ಶೌಚಾಲಯಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಶೌಚಾಲಯ ಸಂಪೂರ್ಣವಾಗಿ ಗಬ್ಬೆದ್ದು ಹೋಗಿದೆ. ಹೊರಗಿನಿಂದ ನೋಡಲು ಅಂದವಾಗಿ ಕಾಣಿಸಿದರೆ ಸಾಲದು ಅಲ್ಲಿಗೆ ಬರುವವರೆಗೂ ಸರಿಯಾದ ರೀತಿಯ ವ್ಯವಸ್ಥೆ ಇರಬೇಕು. ಇದನ್ನು ಅರಿತು ಮುಂದಿನ ದಿನಗಳಲ್ಲಾದರೂ ಸರಿಯಾದ ರೀತಿಯ ಶೌಚಾಲಯ ವ್ಯವಸ್ಥೆಯನ್ನು ಮಾಡಿಕೊಡಬೇಕು ಇಲ್ಲವಾದಲ್ಲಿ ಫ್ರೀಡಂ ಪಾರ್ಕಿಗೆ ಬರುವಂಥ ಸಾವಿರಾರು ಜನರು ಫ್ರೀಡಂ ಪಾರ್ಕನ್ನು ಶೌಚಾಲಯ ಮಾಡಿಕೊಳ್ಳುವುದರಲ್ಲಿ ಎರಡನೇ ಮಾತಿಲ್ಲ.

error: Content is protected !!