ಸಿ.ಸಿ.ಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿನಾಂಕ ೧೯/೧೦/೨೦೨೨ ರಂದು ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಹುಣಸೂರು ಮುಖ್ಯರಸ್ತೆ, ಆದಿತ್ಯಾ ಬಡಾವಣೆಯಲ್ಲಿರುವ ಯಶಸ್ವಿನಿ ಚೌಲ್ಟಿç ಬಳಿ ಇರುವ ಆಟೋಗ್ಯಾರೇಜ್ ಹಿಂಭಾಗದಲ್ಲಿರುವ ಕೊಠಡಿಯಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವನ್ನಾಗಿಟ್ಟುಕೊಂಡು ಅಂದರ್ ಬಾಹರ್ ಎಂಬ ಇಸ್ವೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ, ಇಸ್ವೀಟ್ ಜೂಜಾಟದಲ್ಲಿ ತೊಡಗಿದ್ದ ೩೨ ಜನರನ್ನು ವಶಕ್ಕೆ ಪಡೆದು, ಪಣವಾಗಿದ್ದ ಇಟ್ಟಿದ್ದ ರೂ ೧೭, ೨೪,೦೦೦/- ನಗದು ಹಣ, ಹಣ ಎಣಿಕೆ ಮಾಡಲು ಉಪಯೋಗಿಸಿದ್ದ ಯಂತ್ರ ಹಾಗೂ ಜೂಜಾಟಕ್ಕೆ ಬಳಸಿದ್ದ ೫೨ ಇಸ್ವೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದು ಈ ಸಂಬAಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್, ಐ.ಪಿ.ಎಸ್ ಹಾಗೂ ಸಿ.ಸಿ.ಬಿ ಘಟಕದ ಎ.ಸಿ.ಪಿ ರವರಾದ ಶ್ರೀ ಸಿ.ಕೆ. ಅಶ್ವಥನಾರಾಯಣ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಶೇಖರ್ ಹಾಗೂ ಸಿಬ್ಬಂದಿಗಳಾದ ರವಿಕುಮಾರ್, ಸಲೀಂಖಾನ್, ರಾಮಸ್ವಾಮಿ, ಲಕ್ಷಿö್ಮÃಕಾಂತ.ಪಿ.ಎನ್, ಆನಂದ, ಯಾಕೂಬ್ ಷರೀಫ್, ಪವನ್, ನಬೀಪಟೇಲ್, ಮಹೇಶ್, ಚಂದ್ರಶೇಖರ್, ಗೌತಮ್ ರವರುಗಳು ಮಾಡಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.