ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದ ಕೇಶವಮೂರ್ತಿ ಹಿತ್ಲು ಪ್ರದೇಶದಲ್ಲಿ ಮಾಚ್ 15ರ ರಾತ್ರಿ ಅಕ್ರಮ ಜೂಜಾಟ ನಡೆಯುತ್ತಿದ್ದ ಸ್ಥಳದಲ್ಲಿ ಭಟ್ಕಳ ಗ್ರಾಮೀಣ ಪೊಲೀಸರು ದಾಳಿ ನಡೆಸಿ 26 ಮಂದಿಯನ್ನು ಬಂಧಿಸಿದ್ದಾರೆ.

ರಾತ್ರಿ 11.30ರ ಸುಮಾರಿಗೆ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ರನ್ನಗೌಡ ಪಾಟೀಲ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಅಲ್ಲಿ ಗರ್ ಗರ್ ಮಂಡ್ಲ ಎಂಬ ಜೂಜಾಟ ನಡೆಯುತ್ತಿತ್ತು. ಪ್ರಭಾವಿ ವ್ಯಕ್ತಿಗಳ ಮೇಲೂ ಯಾವುದೇ ಅನುಕಂಪ ತೋರದೆ, ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣ ದಾಖಲಾಗಿರುವವರು:

  • ಮುಂಡಳ್ಳಿ ಹೊಸ್ಮನೆ: ಜಗದೀಶ ಶನಿಯಾರ ನಾಯ್ಕ (30), ನಿತ್ಯಾನಂದ ನಾರಾಯಣ ನಾಯ್ಕ (28), ದೇವೇಂದ್ರ ಜಟ್ಟಪ್ಪ ನಾಯ್ಕ (36).
  • ಮುಂಡಳ್ಳಿ ಸತ್ಯನಾರಾಯಣ ನಗರ: ಹನುಮಂತ ಶನಿಯಾರ ನಾಯ್ಕ (36), ಹನುಮಂತ ಶನಿಯಾರ ನಾಯ್ಕ.
  •  ಮುಂಡಳ್ಳಿ: ನಾಗೇಶ ದುರ್ಗಪ್ಪ ನಾಯ್ಕ (30), ನಾಗರಾಜ ಲಚ್ಮಯ್ಯ ನಾಯ್ಕ.
  • ಮುಟ್ಟಳ್ಳಿ ತಲಾಂದ: ವಿನೋದ ಮಂಜಯ್ಯ ನಾಯ್ಕ (40), ಮಾದೇವ ನಾಯ್ಕ, ಮಂಗಳ ಗೊಂಡ, ಶ್ರೀನಿವಾಸ ತಿಮ್ಮಯ್ಯ ನಾಯ್ಕ, ಮಾದೇವ ನಾಗಪ್ಪ ನಾಯ್ಕ (48).
  • ಶಿರಾಲಿ ಚಿತ್ರಾಪುರ: ಗಣಪತಿ ದುರ್ಗಪ್ಪ ಬಾಕಡ (50), ಮಾದೇವ ಬಾಕಡ, ಶ್ರೀಪಾದ ಬಾಕಡ, ರಾಮಚಂದ್ರ ನಾರಾಯಣ ಬಾಕಡ.
  •  ಭಟ್ಕಳ ಹಳೇ ಬಸ್ ನಿಲ್ದಾಣ: ಅಬ್ದುಲ್ ಗಫೂರ್ ಕೊಚ್ಚಪ್ಪ ಇಕ್ಕೇರಿ.
  • ಮುಂಡಳ್ಳಿ ನೀರಗದ್ದೆ: ಅನಿಲ ನಾಯ್ಕ.
  • ಚೌತನಿ: ವಿನಾಯಕ ಪಾಂಡುರಂಗ ನಾಯ್ಕ, ರಾಮಚಂದ್ರ ನಾಯ್ಕ, ವಿಠ್ಠಲ ನಾಯ್ಕ, ಮಾಸ್ತಯ್ಯ ನಾಯ್ಕ, ಭರತ ರಾಮಾ ನಾಯ್ಕ.
  • ಮುಂಡಳ್ಳಿ ಚರ್ಚ್ ಕ್ರಾಸ್: ಸದಾಶಿವ ನಾಗಪ್ಪ ನಾಯ್ಕ.

ಪೊಲೀಸರು ಈ ಪ್ರಕರಣದ ಕುರಿತು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Related News

error: Content is protected !!