
ನಗರದಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ನಾಲ್ಕು ಮಕ್ಕಳ ತಾಯಿಯೊಬ್ಬರ ಮೇಲೆ ದೆಹಲಿ ಮೂಲದ ಮಹಿಳೆಯೊಂದಿಗೆ ನಾಲ್ವರು ವ್ಯಕ್ತಿಗಳು ಪೈಶಾಚಿಕ ಕೃತ್ಯ ಎಸಗಿದ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಮಹಿಳೆಯನ್ನು ಹೋಟೆಲ್ ಟೆರೆಸ್‌ಗೆ ಕರೆದುಕೊಂಡು ಹೋಗಿ ಊಟ ನೀಡುವ ನೆಪದಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮಾನವೀಯತೆಯ ಕನಿಷ್ಠ ಅಂಶವನ್ನೂ ಮರೆತು, ಆಕೆಯ ಮುಖ ಪರಚಿ ಕ್ರೂರವಾಗಿ ವರ್ತಿಸಿದ್ದಾರೆ.
ಅತ್ಯಾಚಾರದ ಸಮಯದಲ್ಲಿ ಮಹಿಳೆ ಮರಿಯಾದಂತೆ ಕಣ್ಣೀರಿಟ್ಟು, “ದಯವಿಟ್ಟು ಬಿಡಿ” ಎಂದು ಹಿಂದಿಯಲ್ಲಿ ಬೇಡಿಕೊಂಡರೂ ಕಾಮುಕರು ನಿರ್ದಯವಾಗಿ ಬೆಳಗಿನ ಜಾವದವರೆಗೆ ಆಕೆಯನ್ನು ಹಿಂಸಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ, ಈ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿ, ಆಕೆಯನ್ನು ಬಿಟ್ಟು ಪರಾರಿಯಾದರು. ಈ ಸಂದರ್ಭ ಮಹಿಳೆಯ ಮೊಬೈಲ್ ಫೋನ್ ಕಳವಾಗಿದ್ದರಿಂದ, ಅವರು ತಕ್ಷಣವೇ 112 ತುರ್ತುಸೇವೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಘಟನೆ ತಿಳಿದ ಕೂಡಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿ, ಆರೋಪಿ ಅಜಿತ್, ವಿಶು, ಶಿಬುಲ್ ಮತ್ತು ಶೋಭನ್ಎಂಬವರನ್ನು ತಕ್ಷಣವೇ ಬಂಧಿಸಿದರು. ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡ್ ಮೂಲದ ಈ ನಾಲ್ವರು ಅಪರಾಧಿಗಳನ್ನು ತಮ್ಮ ರಾಜ್ಯಕ್ಕೆ ಪಲಾಯನ ಮಾಡುವ ಮುನ್ನವೇ ಕಟ್ಟು ನಿಲ್ಲಿಸಲಾಯಿತು.
ಸಂತ್ರಸ್ತ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಭೀಕರ ಘಟನೆಯು ನಾಗರಿಕ ಸಮಾಜಕ್ಕೆ ದೊಡ್ಡ ಎಚ್ಚರಿಕೆಯಾಗಿದ್ದು, ಮಹಿಳೆಯರ ಸುರಕ್ಷತೆ ಸಂಬಂಧ ಹೊಸ ಚರ್ಚೆ ಹುಟ್ಟುಹಾಕಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಮುಂದಾಗಿದ್ದಾರೆ.