More

ಬೆಂಗಳೂರುನಲ್ಲಿ ಗ್ಯಾಂಗ್ ರೇಪ್: ನಾಲ್ಕು ಮಕ್ಕಳ ತಾಯಿಯ ಮೇಲೆ ಅತ್ಯಾಚಾರ,

ನಗರದಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ನಾಲ್ಕು ಮಕ್ಕಳ ತಾಯಿಯೊಬ್ಬರ ಮೇಲೆ ದೆಹಲಿ ಮೂಲದ ಮಹಿಳೆಯೊಂದಿಗೆ  ನಾಲ್ವರು ವ್ಯಕ್ತಿಗಳು ಪೈಶಾಚಿಕ ಕೃತ್ಯ ಎಸಗಿದ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಮಹಿಳೆಯನ್ನು ಹೋಟೆಲ್ ಟೆರೆಸ್‌ಗೆ ಕರೆದುಕೊಂಡು ಹೋಗಿ ಊಟ ನೀಡುವ ನೆಪದಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮಾನವೀಯತೆಯ ಕನಿಷ್ಠ ಅಂಶವನ್ನೂ ಮರೆತು, ಆಕೆಯ ಮುಖ ಪರಚಿ ಕ್ರೂರವಾಗಿ ವರ್ತಿಸಿದ್ದಾರೆ.

ಅತ್ಯಾಚಾರದ ಸಮಯದಲ್ಲಿ ಮಹಿಳೆ ಮರಿಯಾದಂತೆ ಕಣ್ಣೀರಿಟ್ಟು, “ದಯವಿಟ್ಟು ಬಿಡಿ” ಎಂದು ಹಿಂದಿಯಲ್ಲಿ ಬೇಡಿಕೊಂಡರೂ ಕಾಮುಕರು ನಿರ್ದಯವಾಗಿ ಬೆಳಗಿನ ಜಾವದವರೆಗೆ ಆಕೆಯನ್ನು ಹಿಂಸಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಬಳಿಕ, ಈ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿ, ಆಕೆಯನ್ನು ಬಿಟ್ಟು ಪರಾರಿಯಾದರು. ಈ ಸಂದರ್ಭ ಮಹಿಳೆಯ ಮೊಬೈಲ್ ಫೋನ್ ಕಳವಾಗಿದ್ದರಿಂದ, ಅವರು ತಕ್ಷಣವೇ 112 ತುರ್ತುಸೇವೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಘಟನೆ ತಿಳಿದ ಕೂಡಲೇ ಪೊಲೀಸರು ಶೋಧ ಕಾರ್ಯ ಆರಂಭಿಸಿ, ಆರೋಪಿ  ಅಜಿತ್, ವಿಶು, ಶಿಬುಲ್ ಮತ್ತು ಶೋಭನ್ಎಂಬವರನ್ನು ತಕ್ಷಣವೇ ಬಂಧಿಸಿದರು. ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡ್ ಮೂಲದ ಈ ನಾಲ್ವರು ಅಪರಾಧಿಗಳನ್ನು ತಮ್ಮ ರಾಜ್ಯಕ್ಕೆ ಪಲಾಯನ ಮಾಡುವ ಮುನ್ನವೇ ಕಟ್ಟು ನಿಲ್ಲಿಸಲಾಯಿತು.

ಸಂತ್ರಸ್ತ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಭೀಕರ ಘಟನೆಯು ನಾಗರಿಕ ಸಮಾಜಕ್ಕೆ ದೊಡ್ಡ ಎಚ್ಚರಿಕೆಯಾಗಿದ್ದು, ಮಹಿಳೆಯರ ಸುರಕ್ಷತೆ ಸಂಬಂಧ ಹೊಸ ಚರ್ಚೆ ಹುಟ್ಟುಹಾಕಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಮುಂದಾಗಿದ್ದಾರೆ.

nazeer ahamad

Recent Posts

ಬೆಳಗಾವಿ ಘಟನೆಗೆ ಪ್ರತಿಕ್ರಿಯೆ: ಕರ್ನಾಟಕದಲ್ಲಿ ‘ಛಾವಾ’ ಚಿತ್ರ ಪ್ರದರ್ಶನ ರದ್ದುಗೊಳಿಸುವ ಆಗ್ರಹ

ಬೆಳಗಾವಿಯಲ್ಲಿ KSRTC ಕಂಡಕ್ಟರ್ ಮಹದೇವ್ ಅವರು ಕನ್ನಡ ಮಾತನಾಡಿದಕ್ಕಾಗಿ ಮರಾಠಿ ಗುಂಪಿನಿಂದ ಹಲ್ಲೆಗೊಳಗಾದ ಘಟನೆಗೆ ರಾಜ್ಯದಾದ್ಯಂತ ಕನ್ನಡಿಗರು ಭಾರಿ ಆಕ್ರೋಶ…

54 minutes ago

ಅತ್ತೆ-ಸೊಸೆ ಕೋರ್ಟ್ ಆವರಣದಲ್ಲಿ ಹೊಡೆದಾಡಿದ ಘಟನೆ: ವಿಡಿಯೋ ವೈರಲ್

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಅತ್ತೆ-ಸೊಸೆ ನಡುವಿನ ವೈಮನಸ್ಸು ಉಲ್ಬಣಗೊಂಡು ಕೋರ್ಟ್ ಆವರಣದಲ್ಲಿ ಹೊಡೆದಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ…

2 hours ago

ಬೆಳಗಾವಿ ಬಸ್ ಕಂಡಕ್ಟರ್ ಪ್ರಕರಣ: ಹೊಸ ಟ್ವಿಸ್ಟ್ – ಪೋಕ್ಸೋ ಪ್ರಕರಣ ದಾಖಲು

ಬೆಳಗಾವಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮಹಾದೇವಪ್ಪ ಹುಕ್ಕೇರಿ ಮೇಲೆ ಮರಾಠಿ ಗೂಂಡಾಗಿರಿ ನಡೆದ ಘಟನೆ ಹೊಸ ತಿರುವು ಪಡೆದುಕೊಂಡಿದೆ. ಹಿಂದಿನ…

2 hours ago

ಬ್ರಾಹ್ಮಣ ಹುಡುಗಿಗೆ 20 ಲಕ್ಷ, ದಲಿತ ಹುಡುಗಿಗೆ 10 ಲಕ್ಷ; ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯರ ಬ್ಲ್ಯಾಕ್ಮೇಲ್ ಮತ್ತು ಬಲವಂತ ಮತಾಂತರ..!

ರಾಜಸ್ಥಾನದ ಬೇವಾರ ಜಿಲ್ಲೆಯ ವಿಜಯನಗರದಲ್ಲಿ, ಅಪ್ರಾಪ್ತ ಬಾಲಕಿಯರ ಬ್ಲ್ಯಾಕ್ಮೇಲ್, ಲೈಂಗಿಕ ದೌರ್ಜನ್ಯ ಮತ್ತು ಬಲವಂತ ಮತಾಂತರ ಪ್ರಕರಣಗಳು ಬೆಳಕಿಗೆ ಬಂದಿದ್ದು,…

3 hours ago

ಚಾಂಪಿಯನ್ಸ್ ಟ್ರೋಫಿ: ಭಾರತ-ಪಾಕಿಸ್ತಾನ ಮಹಾಯುದ್ಧಕ್ಕೆ ಕ್ಷಣಗಣನೆ, ಐಐಟಿ ಬಾಬಾ ಶಾಕಿಂಗ್ ಭವಿಷ್ಯವಾಣಿ!”

ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯದಲ್ಲಿ ದೀರ್ಘಕಾಲದ ಕ್ರಿಕೆಟ್ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿವೆ.…

4 hours ago

ಆಸ್ಪತ್ರೆಯ ಸಿಸಿಟಿವಿ ಹ್ಯಾಕ್‌ ಮಾಡಿ ಅಶ್ಲೀಲ ವೀಡಿಯೋ ದಂಧೆ: ಗುಜರಾತ್‌ನಲ್ಲಿ ಮೂರು ಮಂದಿ ಅರೆಸ್ಟ್!

ಗುಜರಾತ್ ಪೊಲೀಸರು ಮಹಿಳೆಯರ ಸ್ನಾನ ಮತ್ತು ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು…

5 hours ago