ಬೆಳಗಾವಿ, ಜನವರಿ 15: ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮದ ಸಮೀಪದಲ್ಲಿ ಗ್ಯಾಂಗ್ ರೇಪ್ ಪ್ರಕರಣವು ನಡೆಯಿದ್ದು, ಮೂವರು ಆರೋಪಿಗಳು ಬಂಧಿತನಾಗಿದ್ದಾರೆ. ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳು ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಚಾಲಕ ಕೌತುಕ್ ಬಡಿಗೇರ ಎಂದು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದು, "ಆರೋಪಿ ಅಭಿಷೇಕ್ ಇನ್‌ಸ್ಟಾಗ್ರಾಂನಲ್ಲಿ ಓರ್ವ ಬಾಲಕಿಯನ್ನು ಪರಿಚಯಿಸಿಕೊಂಡಿದ್ದನು. ಅವನು 'ನಾನು ಸವದತ್ತಿಗೆ ಹೋಗುತ್ತಿದ್ದೇನೆ, ನೀನು ಕೂಡ ಬಾ' ಎಂದು ಅವಳನ್ನು ಪ್ರಚೋದಿಸಿದ್ದನು. ನಂಬಿದ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹಾರೂಗೇರಿ ಬಸ್ ನಿಲ್ದಾಣಕ್ಕೆ ಹೋಗಿದ್ದಾಳೆ" ಎಂದು ತಿಳಿಸಿದ್ದಾರೆ.
"ಅಲ್ಲಿ, ಆರೋಪಿ ಅಭಿಷೇಕ್, ಕಾರಿನಲ್ಲಿ ಇತರ ಇಬ್ಬರು ಆರೋಪಿಗಳೊಂದಿಗೆ ಸಂತ್ರಸ್ತರನ್ನು ಕರೆದೊಯ್ಯುತ್ತಾನೆ. ಅವರನ್ನು ಎರ್ಟಿಗಾ ಕಾರಿನಲ್ಲಿ ಸವಸುದ್ದಿ ಗ್ರಾಮದ ಗುಡ್ಡಗಾಡು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅವರು ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ" ಎಂದು ಡಾ. ಗುಳೇದ್ ವಿವರಿಸಿದರು.
"ಈ ವೇಳೆ, ಕಾರಿನಲ್ಲಿ ಕುಳಿತಿದ್ದ ಆರೋಪಿ ಆದಿಲ್ ಜಮಾದಾರ್ ಮತ್ತೊಂದು ಬಾಲಕಿಯನ್ನು ಗ್ಯಾಂಗ್ ರೇಪ್ ಮಾಡಿ, ನಂತರ ಅವರು ಸಂತ್ರಸ್ತರಿಗೆ ಬ್ಲ್ಯಾಕ್‌ಮೇಲ್ ಮಾಡಿದರು. 'ಗೋವಾಕ್ಕೆ ಬರಬೇಕು, ಇಲ್ಲವಾದರೆ ವಿಡಿಯೋವನ್ನು ವೈರಲ್ ಮಾಡುತ್ತೇವೆ' ಎಂದು ಬೆದರಿಕೆ ಹಾಕಿದ್ರು" ಎಂದು ಅವರು ತಿಳಿಸಿದರು.
"ಬಾಲಕಿಯರು ಈ ಕುರಿತು ಮನೆಯಲ್ಲಿ ಮಾಹಿತಿ ನೀಡಿದ್ದು, ಜನವರಿ 13 ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದರು. 24 ಗಂಟೆಗಳೊಳಗೆ ಇಬ್ಬರು ಆರೋಪಿಗಳು ಬಂಧಿತರಾಗಿದ್ದಾರೆ. ನಂತರ ಮತ್ತೊಬ್ಬ ಆರೋಪಿ ಬಂಧಿಸಲ್ಪಟ್ಟನು" ಎಂದು ಅವರು ಹೇಳಿದರು.
"ಆರೋಪಿಗಳ ಹಿನ್ನಲೆಯನ್ನು ಪರಿಶೀಲಿಸಲಾಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಆರೋಪಿಗಳ ಮೊಬೈಲ್‌ಗಳನ್ನು ಜಪ್ತಿ ಮಾಡಿದಾಗ, ಗ್ಯಾಂಗ್ ರೇಪ್ ಸಂಬಂಧಿ ವೀಡಿಯೋಗಳು ಪತ್ತೆಯಾಗಿದೆ" ಎಂದು ಅವರು ಕೊನೆಗೆ ತಿಳಿಸಿದ್ದಾರೆ.
ಜೂಜಿನ ಚಟಕೆ ಬಿದ್ದು ಟೆಕ್ ಉದ್ಯೋಗಿ ಒಬ್ಬನು 18 ಲಕ್ಷ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.…
ಬೆಂಗಳೂರು ಚಾಮರಾಜಪೇಟೆಯಲ್ಲಿ ಹಸುವಿನ ಮೇಲೆ ನಡೆದ ಕ್ರೌರ್ಯದ ಘಟನೆ ಮಾಸುವ ಮೊದಲು, ಹುಬ್ಬಳ್ಳಿಯಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ.…
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಸಹಿ ನಕಲಿ ಮಾಡಿ ಹಣ ವಿತ್‌ಡ್ರಾ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.…
ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯನಟ ಹಾಗೂ ರಂಗಭೂಮಿ ಕಲಾವಿದ ಸರಿಗಮ ವಿಜಿ (ಆರ್. ವಿಜಯಕುಮಾರ್) ಅವರು ಅನಾರೋಗ್ಯದ ಕಾರಣದಿಂದ ಬೆಂಗಳೂರಿನ…
ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಫ್ಲೈಯಿಂಗ್ ಮಷಿನ್ ಬಟ್ಟೆ ಅಂಗಡಿಯಲ್ಲಿ ಖರೀದಿ ನೆಪದಲ್ಲಿ ಬಂದು ಗಲ್ಲೆಯಲ್ಲಿದ್ದ 30 ಸಾವಿರ ರೂಪಾಯಿ ಹಣವನ್ನು…
47 ವರ್ಷದ ಮನೋವೈದ್ಯನೊಬ್ಬ ಕಳೆದ 15 ವರ್ಷಗಳಲ್ಲಿ ಕನಿಷ್ಠ 50 ಹುಡುಗಿಯರನ್ನು ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಮಾಡಿದ ಆರೋಪದ ಮೇಲೆ…