ಮುಂಡಗೋಡ: ತಾಲೂಕಿನ ದಾಸನಕೊಪ್ಪ ರಸ್ತೆಯ ಧರ್ಮಾ ಜಲಾಶಯದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿ 2 ಕೆಜಿ ಗಾಂಜಾ ವಶಪಡಿಸಿಕೊಂಡ ಘಟನೆ ನಡೆದಿದೆ.
ದಾಸನಕೊಪ್ಪ ರಸ್ತೆಯ ಧರ್ಮಾ ಜಲಾಶಯದ ಬಳಿ ಕೇಸರಿ ಬಣ್ಣದ ಕೈ ಚೀಲದಲ್ಲಿ 2 ಕೆ.ಜಿ 28 ಗ್ರಾಂ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಆರೋಪಿ ಸಹಿತ 80 ಸಾವಿರ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದ ಸಲ್ಮಾನ್ ಖಾನ್ ಗೌಸ್ ಖಾನ್ ಆಲೂರು ಎಂಬಾತನೆ ಬಂದಿತ ಆರೋಪಿಯಾಗಿದ್ದಾನೆ.
ಸಿಪಿಐ ಬಿ ಎಸ್ ಲೋಕಾಪುರ ಅವರ ನಿರ್ದೇಶನದಂತೆ ಪಿಎಸ್ಐ ಯಲ್ಲಾಲಿಂಗ ಕುನ್ನೂರು ಮತ್ತು ಹನುಮಂತ ಕುಡುಗುಂಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಣಪತಿ ಹೊನ್ನಳ್ಳಿ, ಕೋಟೇಶ್ ನಾಗರೊಳ್ಳಿ,ಅಣ್ಣಪ್ಪ ಬಡಿಗೇರ್, ಬಸವರಾಜ್ ಲಮಾಣಿ,ಸಂಜು ರಾಥೋಡ್,ಗುರುರಾಜ್ ಬಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವರದಿ:ಮಂಜುನಾಥ ಹರಿಜನ