
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಟಹಳ್ಳಿ ಕ್ರಾಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಐವರು ಪೊಲೀಸರ ಕೈಗೆ ಬಿದ್ದಿದ್ದಾರೆ. ಖಚಿತ ಮಾಹಿತಿ ಪಡೆದ ಪೊಲೀಸರು ಶಂಕಿತ ಕಾರು ತಪಾಸಣೆ ನಡೆಸಿದಾಗ, ಅದರಲ್ಲಿ 35 ಕೆಜಿ ಗಾಂಜಾ ಪತ್ತೆಯಾಗಿದ್ದು, 17.50 ಲಕ್ಷ ರೂಪಾಯಿ ಮೌಲ್ಯದದ್ದಾಗಿದೆ.
ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದರು ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ:
ತಾಯಿ ದೇವಮ್ಮ – ಬಾಗೇಪಲ್ಲಿಯ ಗರಿಗರೆಡ್ಡಿ ಪಾಳ್ಯ ನಿವಾಸಿ
ಆಂಜಿ – ದೇವಮ್ಮನ ಮಗ
ಮಾರಪ್ಪ – ಪಲ್ಲಿಕುಂಟೆ ನಿವಾಸಿ
ವೆಂಕಟರಮಣ
ಆದಿನಾರಾಯಣ
ಘಟನೆಯ ಸಂಬಂಧ ಚಿಕ್ಕಬಳ್ಳಾಪುರ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ ಕಾರು ಪೊಲೀಸರ ವಶಕ್ಕೆ ಜಪ್ತಿಯಾಗಿದೆ.
ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.