ಕುಂದಗೋಳ; ತಾಲೂಕಿನ ಹೀರೆನರ್ತಿ ಗ್ರಾಮದ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು, ದಾರಿಹೋಕರು ದುರ್ನಾತ ದಿಂದ ಬೇಸಿತ್ತಿದ್ದಾರೆ. ಸ್ವಚ್ಚತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ. ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ. ಇಷ್ಟು ಮಾತ್ರವಲ್ಲದೆ ಹಂದಿಗಳು ಕಸವನ್ನು ಎಳೆದಾಡವುದರಿಂದ ರಸ್ತೆ ತುಂಬೆಲ್ಲ ಹರಡುತ್ತದೆ. ಸ್ಥಳೀಯ ನಿವಾಸಿಗಳು ಹಾಗೂ ಹೋಟೆಲ್ ನವರು ಕಸವನ್ನು ರಸ್ತೆಗೆ ಸುರಿಯತ್ತಿದ್ದು ತ್ಯಾಜ್ಯ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ನಿತ್ಯ ನೂರಾರು ಸಾರ್ವಜನಿಕರು ಕುಂದಗೋಳ ಪಟ್ಟಣಕ್ಕೆ ಹೋಗುವು ಜನರಿಗೆ ಮೊದಲು ಕಸದ ರಾಶಿಯ ದರ್ಶನವಾಗುತ್ತಿದೆ. ಹೀಗಾಗಿ ಮೂಗು ಮುಚ್ಚಿಕೊಂಡು ಸಂಚಾರಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸಾರ್ವಜನಿಕರು ಅನುಭವಿಸಿದು ಅಷ್ಟಿಷ್ಟಲ್ಲ, ದಿನಬೆಳಗಾದರೆ ಸಾಕು ದುನಾರ್ತದಲ್ಲ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದುನಾರ್ತದಿಂದ ಸೊಳ್ಳೆಗಳ ಕಾಟವೋ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಬೀತಿ ನಿವಾಸಿಗಳು ಎಡೆಬಿಡದೆ ಕಾಡುತ್ತಿದೆ. ಹಾಗಾದ್ರೆ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಮಾಡುವದರಲ್ಲಿ ಎಡೆವಿದೆ ಅಂತ ಸ್ಪಷ್ಟವಾಗಿ ಗೋಚರಿಸುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಒಳ್ಳೆಯದಲ್ಲ ಎಂದು ಸ್ಥಳೀಯ ನಿವಾಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಂದಗೋಳ ತಾಲೂಕ್ ಸಂಚಾಲಕರು ಬಸವರಾಜ ದೇವರಮನಿ ಎಂದು ದೂರಿದರು.
ಸರಕಾರ ಸ್ವಚ್ಛತಾ ಅಭಿಯಾನ, ಸ್ವಚ್ಛ ಭಾರತ, ಸ್ವಚ್ಛ ಭಾರತ ಮಿಷನ್ ಯೋಜನೆಗಳು ಜಾರಿಗೆ ಬಂದರು ಇದ್ಯಾವುದೂ ಸದ್ಬಳಕೆ ಆಗದೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡುವುದು ಎಷ್ಟರಮಟ್ಟಿಗೆ ಸರಿ. ಮೂಲಭೂತ ಸೌಕರ್ಯಯದಿಂದ ವಂಚಿತವಾಯಿತ ಅಧಿಕಾರಿಗಳೇ? ಗ್ರಾಮದ ಸ್ವಚ್ಚತೆ ಕೊಂಡೊಯ್ಯುವ ಅಭಿವೃದ್ಧಿ ಅಧಿಕಾರಿ ಕಣ್ಣು ಮುಚ್ಚಿ ಕುಳಿತಿದ್ದಾರೇನೋ? ಒಂದು ಗೊತ್ತಿಲ್ಲ. ಆದರೆ ಗ್ರಾಮದ ಸ್ವಚ್ಚತೆ ಕಾಪಾಡುವಲ್ಲಿ ಈ ಅಧಿಕಾರಿಗಳು ಮನಸೋ ಇಚ್ಚೆ ವರ್ತನೆ ಮಾಡುವುದು ಸರಿಯಲ್ಲ.
ಒಟ್ಟಿನಲ್ಲಿ ಗ್ರಾಮದ ಅನೈರ್ಮಲ್ ಹೊಡೆದೂಡಸಿ ನೈರ್ಮಲ್ಯ ಕಾಪಾಡಿಕೊಳ್ಳಲು ಪ್ರಯತ್ನಸುತ್ತಾರೋ ಇಲ್ಲೋ ಕಾದು ನೋಡಬೇಕು
ವರದಿ; ಶಾನು ಯಲಿಗಾರ