ಮನೆಯಲ್ಲಿಟ್ಟಿದ್ದ ಕಳೆನಾಶಕವನ್ನು ಜ್ಯೂಸ್ ಎಂದು ತಪ್ಪಾಗಿ ಗ್ರಹಿಸಿ ಕುಡಿದ ಪರಿಣಾಮ 14 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿಧಿಕೃಷ್ಣ (14) ಎಂಬ ಬಾಲಕಿಯು ಈ ದುರ್ಘಟನೆಗೆ ಬಲಿಯಾಗಿದ್ದಾಳೆ. ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದ ನಿಧಿ, ಮಾರ್ಚ್ 4ರಂದು ತನ್ನ ಮನೆಯಲ್ಲಿದ್ದ ಖಾಲಿ ಅಲೋವೆರಾ ಡಬ್ಬಿನಲ್ಲಿ ಭದ್ರವಾಗಿಟ್ಟಿದ್ದ ಕಳೆನಾಶಕವನ್ನು ತಪ್ಪಾಗಿ ಜ್ಯೂಸ್ ಎಂದು ಭಾವಿಸಿ ಕುಡಿದಿದ್ದಾಳೆ. ಇದರಿಂದ ಅನಾರೋಗ್ಯ ತಲೆದೋರಿದ ಹಿನ್ನೆಲೆ ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 31ರಂದು ನಿಧಿ ಅಸುನೀಗಿದ್ದಾಳೆ.
ಈ ಘಟನೆಗೆ ಪೋಷಕರ ನಿರ್ಲಕ್ಷ್ಯವೇ ಕಾರಣವೆಂದು ಶಂಕಿಸಲಾಗಿದ್ದು, ಅಪಾಯಕಾರಿಯಾದ ರಾಸಾಯನಿಕವನ್ನು ನಿರ್ಲಕ್ಷ್ಯದಿಂದ ಮನೆಯಲ್ಲೇ ಉಗ್ರಹಿಸಿಕೊಂಡು ಇಡುವುದು ಎಷ್ಟು ಕಾನೂನುಭಂಗವೋ, ಅಷ್ಟೇ ಅಪಾಯಕಾರಿಯೂ ಆಗಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಅಪರಾಧ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಈ ಕುರಿತಾಗಿ ತನಿಖೆ ಮುಂದುವರಿಸಿದ್ದಾರೆ.
ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ಸರ್ಕಾರ ಮತ್ತೊಂದು ಭರ್ಜರಿ ಹೆಜ್ಜೆ ಇಟ್ಟಿದ್ದು, ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯಲ್ಲಿ ಹಿರಿಯ ಅಧಿಕಾರಿ…
ಉತ್ತರ ಕನ್ನಡ/ ರಾಮನಗರ: ಸರಾಯಿ ಕೊಡಿಸದ ಕಾರಣ ಸ್ನೇಹಿತ ಬೈಕ್ ಜೊತೆ ಪರಾರಿಯಾಗಿದ್ದ ಜೊಯಿಡಾದ ಪ್ರವೀಣ ಸುಧೀರ್'ರನ್ನು ಪೊಲೀಸರು ಬಂಧಿಸಿದ್ದಾರೆ.…
ಶಿರಸಿ: ಜಮೀನು ವ್ಯಾಜ್ಯದ ವಿಷಯವಾಗಿ ವ್ಯಕ್ತಿಯೊಬ್ಬರ ಕೊಲೆಗೆ ಪ್ರಯತ್ನಿಸಿದ ಆರೋಪಿ ಪರಮೇಶ್ವರ ಪಿಳ್ಳೆ ಅಪರಾಧಿ ಎಂದು ಸಾಭೀತಾಗಿದೆ. ಈ ಹಿನ್ನಲೆ…
ಉತ್ತರ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 5ರಂದು ಬಾಬು ಜಗಜೀವನ ರಾಮ್ ಜಯಂತಿ ಹಾಗೂ ಏಪ್ರಿಲ್ 14ರಂದು ಬಿ ಆರ್ ಅಂಬೇಡ್ಕರ್…
ನಗರದಲ್ಲಿ ಪೊಲೀಸರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಡಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ನಡೆದ…
ರಾಯಚೂರಿನಲ್ಲಿ ಕೌಟುಂಬಿಕ ಕಲಹದ ದೂರಿನ ಮೇಲೆ ಬಂಧನಕ್ಕೊಳಗಾದ ಯುವಕನೊಬ್ಬ ಪೊಲೀಸರು ನಡೆಸಿದ ಹಲ್ಲೆಯಿಂದ ಸಾವನ್ನಪ್ಪಿದೆಯೆಂಬ ಆರೋಪದೊಂದಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.…