ಮುಂಡಗೋಡ:-ತಾಲೂಕಿನಲ್ಲಿ ಮಳೆಯ ಆರ್ಭಟಕ್ಕೆ ಪ್ರತಿದಿನ ಒಂದಿದಿಲ್ಲೊಂದು ಅವಾಂತರಗಳು ಆಗುತ್ತಿವೆ. ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋದ್ನಾಳ ಗ್ರಾಮದ ಅಂಗನವಾಡಿ ಕೇಂದ್ರ ಎಲ್ಲೆಂದರಲ್ಲಿ ಬಿರುಕು ಬಿಟ್ಟು ಅಪಾಯಕಾರಿ ಹಂತಕ್ಕೆ ತಲುಪಿದೆ. ಕಟ್ಟಡದ ಮೇಲ್ಚಾವಣಿಯು ಅಲ್ಲಲ್ಲಿ ಶಿಥಿಲಗೊಂಡು ಕಳಚಿ ಬೀಳುತ್ತಿದೆ ಹಾಗಾಗಿ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಗ್ರಾಮಸ್ಥರಾದ ಲಾಮು ರಾಮು ಎಡಗೆ.
ಅಧಿಕಾರಿಗಳಿಗೆ ಗಮನಿಸಿ:-
ಈ ರೀತಿಯಾಗಿ ಅಪಾಯಕಾರಿಯಾಗಿರುವ ಕಟ್ಟಡದಲ್ಲಿ ಮಕ್ಕಳನ್ನು ಕೂರಿಸುವ ಬದಲು,ಬದಲಿ ವ್ಯವಸ್ಥೆ ಮಾಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ತುರ್ತು ಕ್ರಮ ಕೈಗೊಳ್ಳಬೇಕಿದೆ.
ಕಳಪೆ ಕಾಮಗಾರಿ
ಈ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಕೇವಲ 12 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಈ ವರ್ಷದ ಮಳೆಗೆ ಇಷ್ಟೊಂದು ಅಪಾಯಕಾರಿ ರೀತಿಯಲ್ಲಿ ಬಿರುಕು ಬಿಟ್ಟಿದ್ದು ನೋಡಿದರೆ ಕಟ್ಟಡದ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಶಯ ಮೂಡುತ್ತಿದೆ ಹೀಗಾಗಿ ಇನ್ನೂ ಮುಂದೆಯಾದರೂ ಸಾರ್ವಜನಿಕ ಕಟ್ಟಡಗಳನ್ನು ಕಟ್ಟಿಸುವಾಗ ಇಂಜಿನಿಯರ್ ಗಳು ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕಿದೆ.
ವರದಿ: ಮಂಜುನಾಥ್ ಎಫ್ ಎಚ್