Latest

ಚಿನ್ನದ ವಂಚನೆ ಪ್ರಕರಣ: ಪಿಎಸ್‌ಐ ಸಂತೋಷ್ ಅಮಾನತು

ಬೆಂಗಳೂರು: ಆಭರಣ ಅಂಗಡಿಯಿಂದ ಚಿನ್ನ ಪಡೆದು ವಾಪಸ್ ನೀಡದೆ ದುರ್ನಡತೆ ತೋರಿದ ಕಾಟನ್‌ಪೇಟೆ ಠಾಣೆ ಪಿಎಸ್‌ಐ ಪಿ.ಜಿ. ಸಂತೋಷ್ ಅವರನ್ನು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅಮಾನತುಗೊಳಿಸಿದ್ದಾರೆ.

ಸಂತ್ರಸ್ತ ಧನಂಜಯ್ ಶ್ಯಾಮ್ ರಾವ್ ಮಾಲಿ ನೀಡಿದ ದೂರಿನ ಅನ್ವಯ ಹಲಸೂರು ಗೇಟ್ ಠಾಣೆಯಲ್ಲಿ ಸಂತೋಷ್ ವಿರುದ್ಧ ವಂಚನೆ, ನಂಬಿಕೆ ದ್ರೋಹ ಮತ್ತು ಜೀವ ಬೆದರಿಕೆ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿನ್ನ ಪಡೆದು ವಾಪಸ್ ನೀಡದ ಸಂತೋಷ್

2020ರಲ್ಲಿ ಹಲಸೂರು ಗೇಟ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ಐ ಸಂತೋಷ್, ನಗರದ ಸಿಟಿ ಸ್ಟ್ರೀಟ್ ರಸ್ತೆಯಲ್ಲಿರುವ ಧನಂಜಯ್ ಅವರ ಚಿನ್ನದ ಅಂಗಡಿಗೆ ಭೇಟಿ ನೀಡಿ, ನ್ಯಾಯಾಂಗ ವಿಚಾರಣೆಗಾಗಿ 950 ಗ್ರಾಂ ಚಿನ್ನದ ಗಟ್ಟಿಯನ್ನು ತಾತ್ಕಾಲಿಕವಾಗಿ ವಶಪಡಿಸಿಕೊಂಡರು. ಅದನ್ನು ಸಂಜೆಯೊಳಗೆ ಮರಳಿಸುವ ಭರವಸೆ ನೀಡಿದರೂ, ತಿಂಗಳುಗಳ ಕಾಲ ಚಿನ್ನವನ್ನು ವಾಪಸ್ ನೀಡಲು ವಿಫಲರಾಗಿದ್ದರು.

ಧನಂಜಯ್ ಅವರ ಅನೇಕ ಪ್ರಯತ್ನಗಳ ನಡುವೆಯೂ ಸಂತೋಷ್ ಚಿನ್ನವನ್ನು ಹಿಂದಿರುಗಿಸದೆ, ಬದಲಿಗೆ ಹನುಮಂತನಗರದಲ್ಲಿರುವ ತನ್ನ ಪತ್ನಿಯ ಹೆಸರಿನಲ್ಲಿನ ನಿವೇಶನವನ್ನು ನೋಂದಾಯಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಈ ಆಸ್ತಿಯನ್ನು ಯಾರಿಗೂ ಗೊತ್ತಾಗದಂತೆ ಬೇರೊಬ್ಬರಿಗೆ ಮಾರಾಟ ಮಾಡಿದ್ದರು.

ಖಾಲಿ ಚೆಕ್, ಬೆದರಿಕೆ, ಮತ್ತು ದೂರು

ಸಂತೋಷ್ ನೀಡಿದ್ದ ಚೆಕ್‌ಗಳು ಬ್ಯಾಂಕಿನಲ್ಲಿ ಬೌನ್ಸ್ ಆಗುತ್ತಿದ್ದಂತೆ ಧನಂಜಯ್ ಅವರ ಶಂಕೆ ಮತ್ತಷ್ಟು ಗಂಭೀರಗೊಂಡಿತು. ಅವರು ಇದನ್ನು ಪ್ರಶ್ನಿಸಿದಾಗ, ಸುಳ್ಳು ಪ್ರಕರಣ ದಾಖಲಿಸಿ ಬಂಧಿಸುವ ಬೆದರಿಕೆ ನೀಡುತ್ತಿದ್ದ ಸಂತೋಷ್ ವಿರುದ್ಧ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಅವರಿಗೆ ದೂರು ಸಲ್ಲಿಸಲಾಯಿತು.

ಆಂತರಿಕ ತನಿಖೆ ಮತ್ತು ಅಮಾನತು

ಧನಂಜಯ್ ಅವರ ದೂರಿನ ಆಧಾರದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಅವರು ಆಂತರಿಕ ತನಿಖೆ ನಡೆಸಿ, ಸಂತೋಷ್ ಕರ್ತವ್ಯಲೋಪ, ವಂಚನೆ ಹಾಗೂ ದುರ್ನಡತೆಯಲ್ಲಿ ತೊಡಗಿರುವುದನ್ನು ದೃಢಪಡಿಸಿದರು. ಈ ವರದಿ ಆಧಾರದಲ್ಲಿ ಡಿಸಿಪಿ ಅವರು ಪೊಲೀಸ್ ಕಮಿಷನರ್ ಬಿ. ದಯಾನಂದ ಅವರ ಗಮನಕ್ಕೆ ತರಲಾಗಿ, ಪಿಎಸ್‌ಐ ಸಂತೋಷ್ ಅವರನ್ನು ತಕ್ಷಣದ ಪರಿಣಾಮದಿಂದ ಅಮಾನತುಗೊಳಿಸಿ, ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ.

ಈ ಪ್ರಕರಣವು ಪೊಲೀಸ್ ಇಲಾಖೆಯ ಒಳಗಿನ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ವಿನಿಯೋಗದ ಕುರಿತಾಗಿ ಗಂಭೀರ ಚರ್ಚೆಗೆ ಕಾರಣವಾಗಿದೆ.

nazeer ahamad

Recent Posts

₹40,000 ಲಂಚ ಸ್ವೀಕರಿಸುವಾಗ ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರು ಚಾಲಕ ಲೋಕಾಯುಕ್ತ ಬಲೆಗೆ!

ಚನ್ನಗಿರಿ: ಅಮಾನತುಗೊಂಡ ಗ್ರಂಥಾಲಯ ಮೇಲ್ವಿಚಾರಕರನ್ನು ಪುನರ್‌ನೇಮಕ ಮಾಡಿಸಲು ₹40,000 ಲಂಚ ಪಡೆಯುತ್ತಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಕೆ. ಉತ್ತಮ್…

7 minutes ago

ಅತ್ಯಾಚಾರಕ್ಕೆ ಮುಂದಾದ ತಂದೆ: ಮರ್ಮಾಂಗ ಕಟ್ ಮಾಡಿದ ಪುತ್ರಿ!

ಮಹಾರಾಷ್ಟ್ರದ ನಲಸೋಪಾರ ಪೂರ್ವದ ಚಾಲ್‌ನಲ್ಲಿ ನಡೆದ ತೀವ್ರ ಆಘಾತಕಾರಿ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಎರಡು ವರ್ಷಗಳಿಂದ ನಿರಂತರ ಲೈಂಗಿಕ…

2 hours ago

ಪತ್ನಿಗೆ ವರದಕ್ಷಿಣೆ ಕಿರುಕುಳ,: ಸಬ್‌ ಇನ್ಸ್‌ಪೆಕ್ಟರ್‌ ವಿರುದ್ಧ FIR

ಧರ್ಮಸ್ಥಳ ಸಬ್‌ ಇನ್ಸ್‌ಪೆಕ್ಟರ್‌ ಕಿಶೋರ್‌ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದೆ. ತಮ್ಮ ವರ್ಗಾವಣೆಗೆ…

2 hours ago

“ಗುಬ್ಬಿಯಲ್ಲಿ 15 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಅಂತರ್-ರಾಜ್ಯ ಕಳ್ಳರ ಬಂಧನ, 16 ಲಕ್ಷ ಮೌಲ್ಯದ ಸ್ವತ್ತು ವಶ”

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ 15 ಲಕ್ಷ ನಗದು ಕಳ್ಳತನಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸ್ ಠಾಣೆ ಪೊಲೀಸರು ಇಬ್ಬರು…

3 hours ago

ಲಾಭಕ್ಕಿಂತ ಹೊರೆಯೇ ಹೆಚ್ಚು, ಸ್ಮಾರ್ಟ್ ಮೀಟರ್ ವಿರುದ್ಧ ಬೆಂಗಳೂರಿನ ಜನರ ಆಕ್ರೋಶ

ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ವಿದ್ಯುತ್ ಬಿಲ್ ಹೆಚ್ಚಾಗಿರುವುದರಿಂದ ಜನರು ತೊಂದರೆಗೆ…

3 hours ago

ಶಿವಮೊಗ್ಗದಲ್ಲಿ ಡಿವೈಎಸ್‌ಪಿ ಲೋಕಾಯುಕ್ತ ಬಲೆಗೆ

ಶಿವಮೊಗ್ಗದ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ಕೃಷ್ಣಮೂರ್ತಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರಿಂದ…

4 hours ago