ಗುಜರಾತ್‌ನ ವಡೋದರಾದ ಸುರ್‌ಸಾಗರ್ ಸರೋವರದಲ್ಲಿ 111 ಅಡಿ ಎತ್ತರದ ಶಿವನ ಪ್ರತಿಮೆಯನ್ನು 12 ಕೋಟಿ ರೂಪಾಯಿ ಮೌಲ್ಯದ ಚಿನ್ನದಿಂದ ಮಾಡಲಾಗಿದೆ. ಈ ಮೂರ್ತಿ ನಿರ್ಮಾಣಕ್ಕಾಗಿ 17.5 ಕೆಜಿ ಚಿನ್ನ ಬಳಸಲಾಗಿದೆ.
ಮಂಜಲ್‌ಪುರ ಶಾಸಕ ಯೋಗೀಶ್ ಪಟೇಲ್ ನೇತೃತ್ವದಲ್ಲಿ ಸತ್ಯಂ, ಶಿವಂ, ಸುಂದರಂ ಸಮಿತಿ ಎಂಬ ಟ್ರಸ್ಟ್ ಈ ಬೃಹತ್ ಶಿವನ ಪ್ರತಿಮೆಯನ್ನು ಸ್ಥಾಪಿಸಿದೆ. ಈ ಪ್ರತಿಮೆಯ ನಿರ್ಮಾಣ ಕಾರ್ಯ 1996 ರಲ್ಲಿ ಪ್ರಾರಂಭವಾಗಿ 2002 ರಲ್ಲಿ ಪೂರ್ಣಗೊಂಡಿತು. ಈ ವಿಗ್ರಹ ಆಗ ತಾಮ್ರದಿಂದ ಮಾಡಲ್ಪಟ್ಟಿತ್ತು. ನಂತರ, ಸ್ವರ್ಣ ಸಂಕಲ್ಪ ಪ್ರತಿಷ್ಠಾನವು ಪ್ರತಿಮೆಗೆ ಚಿನ್ನದ ಲೇಪನ ಮಾಡಲು ನಿರ್ಧರಿಸಿತು. ಅಂತಿಮವಾಗಿ ದೇವಾದಿದೇವನ ವಿಗ್ರಹ ಇದೀಗ ಸ್ವರ್ಣಲೇಪನದಲ್ಲಿದೆ. ಸ್ವರ್ಣ ಲೇಪನಕ್ಕೆ ಅಗತ್ಯ ಹಣ ನೀಡಲು ಜನರು ಮುಂದೆ ಬಂದು ಸತ್ಯಂ, ಶಿವಂ, ಸುಂದರಂ ಸಮಿತಿ ಟ್ರಸ್ಟ್ ಗೆ ದೇಣಿಗೆ ರೂಪದಲ್ಲಿ ನೆರವು ನೀಡಿದರು. ಹೀಗಾಗಿ 17.5 ಕೆಜಿ ಚಿನ್ನವನ್ನು ಚಿನ್ನದ ಲೇಪನಕ್ಕೆ ಬಳಸಲಾಗಿದ್ದು, 12 ಕೋಟಿ ರೂಪಾಯಿ ವೆಚ್ಚವಾಗಿದೆ.
ವಡೋದರದಲ್ಲಿ ಶಿವನ ವಾರ್ಷಿಕ ಮೆರವಣಿಗೆಯು ಸುರ್ಸಾಗರ್ ಬಳಿ ಕೊನೆಗೊಳ್ಳುತ್ತದೆ. ನಂತರ ವಿಗ್ರಹದ ಬಳಿ ಆರತಿ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರವರು 111 ಅಡಿ ಚಿನ್ನದ ಲೇಪಿತ ಶಿವನ ಪ್ರತಿಮೆಯನ್ನು ವಡೋದರಾಕ್ಕೆ ಮಹಾಶಿವರಾತ್ರಿಯ ಸಂದರ್ಭದಲ್ಲಿ ಅಧಿಕೃತವಾಗಿ ಸಮರ್ಪಿಸಲಿದ್ದಾರೆ. ವಡೋದರಾ ನಗರದ ಜನರು ಈ ಹಬ್ಬಗಳಲ್ಲಿ ಭಾಗವಹಿಸಲು ಉತ್ಸುಕರಾಗಿದ್ದು, ಶಿವನ ಮೂರ್ತಿ ಅನಾವರಣಕ್ಕೆ ಜನಸಾಗರವೇ ಹರಿದು ಬರಲಿದೆ.