ಕರ್ನಾಟಕದಲ್ಲಿ ಕನಿಷ್ಠ ವೇತನ ಪ್ರಕಟ: ಕರ್ನಾಟಕ ರಾಜ್ಯ ಸರ್ಕಾರ ಕನಿಷ್ಠ ವೇತನ ಪ್ರಕಟಿಸಿದೆ. ಕೊರೋನಾ ಕಾಟದಿಂದಾಗಿ ಕಳೆದ 2 ವರ್ಷಗಳಿಂದ ನಿಂತುಹೋಗಿದ್ದ ಕನಿಷ್ಠ ವೇತನವನ್ನು ಸರ್ಕಾರ ಜಾರಿಗೆ ಮುಂದಾಗಿದೆ. ಈ ಮೂಲಕ ಕಾರ್ಮಿಕರಿಗೆ ಸರ್ಕಾರ ಗುಡ್ನ್ಯೂಸ್ ಕೊಟ್ಟಿದೆ.
ಕೊರೋನಾದಿಂದ ಕನಿಷ್ಠ ವೇತನ ಪರಿಷ್ಕೃರಣೆ ಆಗಿರಲಿಲ್ಲ. ಈಗ ಒಂದಷ್ಟು ವಿಭಾಗಕ್ಕೆ ಕನಿಷ್ಠ ವೇತನ ಜಾರಿಯಾಗಿದ್ದು ಕಾರ್ಮಿಕರಿಗೆ ಹಬ್ಬಗಳ ಮಾಸದಂದೇ ಗಿಫ್ಟ್ ಸಿಕ್ಕಂತಾಗಿದೆ. ಹೊಸ ವೇತನವು ಜುಲೈ 28ರಿಂದ ಅಧಿಸೂಚನೆ ಪ್ರಕಟವಾದಾಗಿನಿಂದ ಜಾರಿಗೆ ಬಂದಿದೆ. ಕಾರ್ಮಿಕರ ವೇತನ, ಪಿಎಫ್ಗಾಗಿ ಕಡಿತವಾಗುವ ಹಣ ಹಾಗೂ ಕೆಲಸದ ಸಮಯ ಬದಲಾಗುತ್ತೆ ಅನ್ನೋ ಚರ್ಚೆ ನಡುವೆಯೇ ಕನಿಷ್ಠ ವೇತನ ಪ್ರಕಟವಾಗಿದೆ.
ಯಾರಿಗೆಷ್ಟು ಕನಿಷ್ಠ ವೇತನ..?
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಗುಡ್ನ್ಯೂಸ್ ಸಿಕ್ಕಂತಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಸಿಗಲಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ. ಬಿಬಿಎಂಪಿ ಸಿಬ್ಬಂದಿಗೂ ಕನಿಷ್ಠ ವೇತನ ಜಾರಿ ನೆಮ್ಮದಿ ತರಿಸಿದೆ. ಸರ್ಕಾರ ಕೊಡುವ ಕನಿಷ್ಠ ವೇತನ ಪ್ಲಾನ್ನಲ್ಲಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯೂ ಸೇರಿದೆ.
ಕನಿಷ್ಠ ವೇತನ ಜಾರಿ
ಕನಿಷ್ಠ ವೇತನದಿಂದ BBMP ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರು ಮತ್ತು ಕ್ಲರ್ಕ್‌ಗಳು, ಕಂಪ್ಯೂಟರ್/ಡಾಟಾ ಎಂಟ್ರಿ ಆಪರೇಟರ್‌ಗಳು, ಲ್ಯಾಬ್ ತಂತ್ರಜ್ಞರು ಮತ್ತು ಸಹಾಯಕ ಗ್ರಂಥಪಾಲಕರು ಅಂದಾಜು 18,000 ರೂಪಾಯಿಯಷ್ಟು ಸಂಬಳ ಪಡೆಯಲಿದ್ದಾರೆ.
ಯಾರ ಸಂಬಳ ಎಷ್ಟಾಗಿದೆ..?
ಕ್ಲರ್ಕ್-16,564 ರೂಪಾಯಿ
ಡ್ರೈವರ್ ಕಮ್ ನಿರ್ವಾಹಕರು- 15,777 ರೂಪಾಯಿ.
ಚಾಲಕರು- 15,112 ರೂಪಾಯಿ.
ಕ್ಲೀನರ್- 13,974 ರೂಪಾಯಿ.
ಮೆಕ್ಯಾನಿಕ್‌ಗಳು- 14,657 ರೂಪಾಯಿ.
ಪ್ಲಂಬರ್‌ಗಳು- 14,657 ರೂಪಾಯಿ.
ವಾಟರ್ಮೆನ್ಗಳು- 14,657 ರೂಪಾಯಿ.
ಇದಿಷ್ಟೇ ಅಲ್ಲದೇ ವಿವಿಧ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಗುಡ್ನ್ಯೂಸ್ ಸಿಕ್ಕಿದೆ. ಅವರ ವೇತನವೂ 13 ಸಾವಿರ ರೂಪಾಯಿಯಿಂದ 17 ಸಾವಿರ ರೂಪಾಯಿವರೆಗೆ ಏರಿಕೆಯಾದಂತಾಗಿದೆ.
ವಿವರ ಇಲ್ಲಿದೆ
ಅಟೆಂಡರ್- 13,974 ರೂಪಾಯಿ.
ತೋಟದ ಕೆಲಸಗಾರರು- 13,974 ರೂಪಾಯಿ.
ಸೆಕ್ಯೂರಿಟಿ ಗಾರ್ಡ್- 13,974 ರೂಪಾಯಿ.
ಬೀದಿ ಗುಡಿಸುವವರು-17,306 ರೂಪಾಯಿ.
ತ್ಯಾಜ್ಯ ಕೆಲಸಗಾರರು- 17,306 ರೂಪಾಯಿ.
ಹೊಸ ವೇತನವು ಜುಲೈ 28ರಿಂದ ಅಧಿಸೂಚನೆಯಾದಾಗಿನಿಂದ ಜಾರಿಗೆ ಬಂದಿದೆ. ಆದಾಯ ಕುಂಠಿತದಿಂದ ಕನಿಷ್ಠ ವೇತನ ಜಾರಿಯಾಗಿರಲಿಲ್ಲ
ಕೇಂದ್ರ ಸರ್ಕಾರ ಕನಿಷ್ಠ ವೇತನ ದರವನ್ನು ಅಧಿನಿಯಮ 1948ರ ಅಡಿಯಲ್ಲಿ 2010ರಲ್ಲಿ ಜಾರಿಮಾಡಿತು. ಅಕ್ಟೋಬರ್ 1ಕ್ಕೆ ಇದನ್ನು ಪರಿಷ್ಕೃರಿಸಲಾಗಿತ್ತು. ಆಯಾ ರಾಜ್ಯ ಸರ್ಕಾರಗಳು ಆಯಾ ಕಾಲಕ್ಕೆ ತಕ್ಕಂತೆ, ವರ್ಷಕ್ಕೊಮ್ಮೆ ದರವನ್ನು ಪರಿಷ್ಕರಣೆ ಮಾಡುತ್ತದೆ. ಆದರೆ ಕೊರೋನಾದಿಂದಾಗಿ, ಆದಾಯ ಕುಂಠಿತವಾಗಿ ಕನಿಷ್ಠ ವೇತನ ಜಾರಿಯಾಗಿರಲಿಲ್ಲ. ಈಗ ಸರ್ಕಾರ ಪ್ರಕಟ ಮಾಡಿದೆ.
ಮುಖ್ಯವಾಗಿ ಕನಿಷ್ಠ ವೇತನ ದರ, ಕೃಷಿ ಸೇರಿದಂತೆ ಅನುಸೂಚಿತ ಉದ್ಯೋಗಗಳಿಗೆ ನಿಗದಿಪಡಿಸಿದ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕ್ಷೇತ್ರಕ್ಕೂ ಅನ್ವಯವಾಗುತ್ತದೆ.
ವರದಿ: ನಾಗರಾಜ್ ಗೊಬ್ಬುರ್
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…