Latest

ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮ…!

ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ 1994-1995 ಮತ್ತು 1998-1999 ರ ಸಾಲಿನ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಏರ್ಪಡಿಸಿದ್ದರು.

ತಮಗೆ ಜ್ಞಾನರ್ಜನೆ ನೀಡಿದ ಗುರುಗಳನ್ನು ಒಂದೇ ಕಡೆ ಸೇರಿಸಿ ಗೌರವ ಸಲ್ಲಿಸುವ ಒಂದು ಅದ್ಬುತ ಕ್ಷಣಕ್ಕೆ ಇಂದು ಯರಗುಪ್ಪಿಯ ಹೈಸ್ಕೂಲ್ ಶಾಲಾ ಅವರಣ ಸಾಕ್ಷಿಯಾಯಿತು.

ಭಾನುವಾರ ತಾಲೂಕಿನ ಜಿ ಎಚ್ ಎಸ್ ಯರಗುಪ್ಪಿ ಪ್ರೌಢಶಾಲೆಯ 1994-1995 ಮತ್ತು 1998-1999
ನೇ ಸಾಲಿನ ವಿದ್ಯಾರ್ಥಿಗಳು ಶಾಲೆಯ ಆವರಣ ದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ, ಹೀಗಾಗಿ ಪುರಾಣ ಪುಣ್ಯಗಳ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ, ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಮತ್ತೊಂದು ವಿಷೇಶ ಅರ್ಥ ನೀಡುತ್ತಿರುವುದು ಸಂತಸದ ವಿಷಯ ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎಮ್ ಎಸ್ ಅಕ್ಕಿ, ಯಾರು ಶಿಕ್ಷಣದಂದ ವಂಚಿತರಾಗಾಬಾರದು. ಶಿಕ್ಷಣದಿಂದ ದೊಡ್ಡ ದೊಡ್ಡ ಹುದ್ದೆಗಳು ಗಿಟ್ಟಿಸಿಕೂಳ್ಳಬಹುದು. ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ತಂಭವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಅಳವಡಿಸಿಕೊಳ್ಳುಬೇಕು ಎಂದರು.

ತ್ರಿವಿಧ ದಾಸೋಹಿ ಶ್ರೀ ಬಸವಣ್ಣಜ್ಜವರು ಕಲ್ಯಾಣಪುರ ಮಠ ಕುಂದಗೋಳ ಮಾತಾನಾಡಿ ಗುರು ಮತ್ತು ಶಿಷ್ಯ ನಡುವೆ ಸಂಭಂದ ಹೇಗೆ ಅಂದರೆ, ಗೋವಿಂದ ಭಟ್ಟರು ಕಳಸ ಗ್ರಾಮದಲ್ಲಿ ಅಸ್ತಮದಿಂದ ಬಳಲುತ್ತಿದ್ದರು ಆ ಸಮಯದಲ್ಲಿ ಶಿವಯೋಗಿ ಶರೀಪರು ಯರಗುಪ್ಪಿ ಗ್ರಾಮದಲ್ಲಿ ಭಜನೆಯಲ್ಲಿ ನಿರತರಾಗಿದ್ದರು. ಗುರುಗಳು ಶರೀಫ ಎಂದು ಕೂಗಿದಾಗ ಆ ಶರೀರ ವಾಣಿ ಸಂತ ಶಿಶುನಾಳ ಷರೀಪ ಅವರಿಗೆ ತಲುಪಿತು. ಇಂತಹ ಗುರು ಶಿಷ್ಯರ ನಡುವೆ ಅವಿನಾಭಾವ ಸಂಭಂದ. ಅದಕ್ಕೆ ಪೂರ್ವಕ ಎಂಬಂತೆ ಈ ಕಾರ್ಯಕ್ರಮವೇ ಸಾಕ್ಷಿ. ಇದನ್ನೆ ನಾವು ಅವಲೋಕನ ಮಾಡಿಕೊಳ್ಳಬೇಕು ಎಂದರು.

ಒಟ್ಟಿನಲ್ಲಿ ಕಾರ್ಯಕ್ರಮದ ಹಳೆಯ ವಿದ್ಯಾರ್ಥಿಗಳು ಶಿಕ್ಷಕರು, ಸ್ನೇಹಿತರ, ಜೊತೆ ತಮ್ಮ ಸ್ನೇಹ ಮಿಲನ ದಲ್ಲಿ ನಗುತ್ತಾ ತಮ್ಮ ತಮ್ಮ ಬಗ್ಗೆ ಹಂಚಿಕೊಂಡರು. ಇನ್ನೂ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಎಳೆ ಎಳೆಯಾಗಿ ಮೆಲುಕು ಹಾಕಿದರು ಇದೊಂದು ವಿಶೇಷವಾಗಿತ್ತು.

ಕಾರ್ಯಕ್ರಮದ ಪ್ರಾಸ್ತಾವಿಕ ಶ್ರೀ ಮೈಲಾರ ಉಪ್ಪಿನವರು ನುಡಿದರು. ಗುರುವಂದನಾ ಕಾರ್ಯಕ್ರಮವನ್ನು ಹನುಮರೆಡ್ಡಿ ಸೋಮರೆಡ್ಡಿ ಅವರು ನಿರೂಪಿಸಿದರು. ಇನ್ನೂ ಗುರುವಂದನಾ ಕಾರ್ಯಕ್ರಮದ ಶರಣಪ್ಪ ನಾಯ್ಕರ ಅವರು ಶಿಕ್ಷಕರ ಪರಿಚಯಸಿದರು. ಸ್ವಾಗತ ಭಾಷಣ ಮತ್ತು ಎಲ್ಲ ಶಿಕ್ಷಕರಿಗೆ ಮಾಲಾರ್ಪಣೆ ಸಿದ್ದು ಕುಲಕರ್ಣಿ ನೆರೆವೆರಿಸಿದರು. ಕಾರ್ಯಕ್ರಮದ ವಂದನಾರ್ಪಣೆ-ಶ್ರೀ ಬಸವರಾಜ ಅರವಾಳ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಡಿವೆಪ್ಪ ಶಿವಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಫಾದ್ಯಕ್ಷರು, ಹಾಗೂ ಸರ್ವ ಸದಸ್ಯರು ಇನ್ನೂ ಶಿಕ್ಷಕರರಾದ ಶ್ರೀ ಜಿ ಎಮ್ ಚಾಕಲಬ್ಬಿ ಶ್ರೀ ಆರ್ ಎನ್ ಕುಲಕರ್ಣಿ ಶ್ರೀ ವಿ ಬಿ ಕೊಟ್ರಶೆಟ್ಟಿ ಶ್ರೀ ಎ ಸ್ಸಿ ಗುಂಡಾರ್ ಶ್ರೀ ಶಾಂತಕುಮಾರ ತಳವಾರ್ ಶ್ರೀಮತಿ ವಾಯಿ ಪಿ ಬೆಳೆಯಲಿ ಶ್ರೀಮತಿ ನಾಗಮಣಿ ನವಲಗುಂದ ಶ್ರೀ ಬಿಎ ಚಂದ್ರನವರ ಶ್ರೀಮತಿ ಎಸ್ವಿ ಪಾಳ್ಯದ ಶ್ರೀ ಪಿಕೆ ಕಣಿವೆ ಶ್ರೀ ಬಿ ಎಸ್ ಪೂಜಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಭೀಮಣ್ಣ ಮಾಯಣ್ಣವರ ಶ್ರೀ ಚೆನ್ನಪ್ಪ ಹಳ್ಳಿಕೇರಿ ಕಾರ್ಯಕ್ರಮದ ವಂದನಾರ್ಪಣೆ-ಶ್ರೀ ಬಸವರಾಜ ಅರವಾಳ, ಯರಗುಪ್ಪಿ ಗ್ರಾಮದ ಅನೇಕ ನಾಗರಿಕರು ಭಾಗವಹಿಸಿದ್ದರು .

ವರದಿ: ಶಾನು ಯಲಿಗಾರ

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago