ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ.
ಹೌದು..! ಕೆಳೆದ ಏಳೆಂಟು ದಿನಗಳಿಂದ ನೀರಿನ ಅಭಾವ ಸೃಷಿಯಾಗಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಅಭಾವ ಹಿನ್ನೆಲೆಯಲ್ಲಿ ಜನರು ಹೊಲ-ಗದ್ದೆಗಳ ಕೆರೆಗಳಿಗೆ ಹೋಗಿ ಕುಡಿಯುವ ನೀರು ತೆಗದುಕೂಂಡು ಬರ್ತಾ ಇದ್ದಾರೆ. ಇನ್ನೂ ದ್ವಿಚಕ್ರವಾಹನ ಹೊಂದಿದವರು ಶಿರಗುಪ್ಪಿ, ಕುಂದಗೋಳ, ಭಂಡಿವಾಡ, ಹೀಗೆ ಬೇರೆ ಗ್ರಾಮಗಳಿಗೆ ಸಂಚಾರಸಿ ಶುದ್ದ ನೀರು ತೆಗದುಕೂಂಡು ಬರ್ತಾ ಇದ್ದಾರೆ. ನೀರಿನ ಬವಣೆ ನೀಗಿಸಲು ಸರಬರಾಜು ಮಾಡುವು ಟ್ಯಾಂಕರ್ ವಾಹನದಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಜನ ಪರದಾಡುವುದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲಾವ?
ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ ಊಂಟಾಗಿದ್ದು, ಕುಡಿಯುವ ನೀರಿಗೆ ಜನ ತತ್ತಿರಿಸುವಂತೆ ಮಾಡಿದೆ. ಸರಕಾರ ನೀರಿನ ಸರಬರಾಜು ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಸಾಕಷ್ಟು ಹಣ ವಿನಿಯೋಗಿಸಲು ಬಿಡುಗಡೆ ಮಾಡಿದರು, ಅಧಿಕಾರಿಗಳ ಬೇಜವಾಬ್ದಾರಿತನ ಇದಕ್ಕೆ ಕಾರಣ ಎನ್ನಬಹುದು. ಸರಕಾರದ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯಡಿ ನಿರ್ಮಾಸಿಲಾಗಿರುವ 13 ಹಳ್ಳಿಗಳಿಗೆ ನೀರು ಸರಬರಾಜು ಮಾಡುವು ಕಾರ್ಯ ಸ್ಥಗತಿಗೂಂಡಿದೆ. ಹಾಗಾದರೆ ಜನರ ಗೋಳು ಕೇಳುವರು ಯಾರು? ಎಂಬ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಕಾರಣ: ರಾಜ್ಯಾದ್ಯಾಂತ ವಿಪರೀತ ಮಳೆಯಿಂದಾಗಿ ಹಳ್ಳ -ಕೂಳ್ಳಗಳು ತುಂಬಿ ಹರಿದ ಪರಿಣಾಮ ಹೆಬಸೂರ ರೈಲ್ವೆ ಬ್ರಿಡ್ಜ್ ಬಳಿ ಕೆಳಗೆ ನೀರು ಸಂಗ್ರಹವಾಗಿರುವುದರಿಂದ, ಪಂಪಸೆಟ್ಟ್ ಅಳವಡಿಸಿ ನೀರು ಹೊರಗೆ ಹಾಕಿ. ನಂತರ ದುರಸ್ತಿಗೆ ಒಳಪಟ್ಟರೆ ಸರಿಪಡಿಸಿ. ಶ್ರೀಘ್ರದಲ್ಲಿ ನೀರಿನ ಸಂಪರ್ಕ ಒದಗಿಸುತ್ತವೆ ಎಂದು ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆ ಅಭಿಯಂತರರು ಮಾಹಿತಿ ನೀಡಿದರು.
————————–
ಆಕಾಶ ವಂದೇ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕುಂದಗೋಳ ವಿಭಾಗ
ಒಟ್ಟಿನಲ್ಲಿ ನೀರಗಾಗಿ ಹಾಹಾಕಾರ ಉಂಟಾಗಿದ್ದು, ಅಧಿಕಾರಿಗಳು ನೀರಿನ ಬವಣೆ ಸರಿದೂಗಿಸುತ್ತರ ಇಲ್ಲೋ ಕಾದು ನೋಡಬೇಕಾಗಿದೆ..
ವರದಿ: ಶಾನು ಯಲಿಗಾರ