ದಿನಾಂಕ: 19/01/2025 ರಂದು ಮಾನ್ಯ ಅಬಕಾರಿ ಅಪರ ಆಯುಕ್ತರು, ಕೇಂದ್ರಸ್ಥಾನ ಬೆಳಗಾವಿ ರವರ, ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗದ, ಮಾನ್ಯ ಅಬಕಾರಿ ಉಪ ಆಯುಕ್ತರು, ಬೆಳಗಾವಿ ಜಿಲ್ಲೆ ದಕ್ಷಿಣ ರವರ ಆದೇಶದಂತೆ, ಮಾನ್ಯ ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಅಧಿಕಾರಿಗಳು ಹಾಗೂ ಅಧೀನ ಸಿಬ್ಬಂದಿ ಕೂಡಿಕೊಂಡು ಖಾನಾಪೂರ ತಾಲೂಕಿನ ಕಣಕುಂಬಿ ತನಿಖಾ ಠಾಣೆಯ ಹತ್ತಿರವಿರುವ ಚೌಕಿ ಗ್ರಾಮದಿಂದ ಮಾನ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಗಸ್ತು ಕಾರ್ಯ ಮಾಡುತ್ತಿರುವಾಗ 1] ಓಮ್ನಿ ಕಾರ ಸಂಖ್ಯೆ: ಜಿಎ-01ಜೆ-1658, 2] ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಸಂಖ್ಯೆ: ಕೆಎ-22/ಇಡಿ-5617, 3] ಹಿರೋ ಹೊಂಡಾ ಪ್ಯಾಶನ್ ದ್ವಿಚಕ್ರ ವಾಹನ ಸಂಖ್ಯೆ: ಕೆಎ-22/ಯು-6928 ರಲ್ಲಿ ಒಟ್ಟು 261.36 ಲೀ. ದಷ್ಟು ಗೋವಾ ಮದ್ಯ ಸಿಕ್ಕಿದ್ದು, ಇದು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ: 10, 11, 12, 14 ಸಹ ಕಲಂ: 32(1), 34, 38(ಎ) ಮತ್ತು 43 ರನ್ವಯ ಅಪರಾಧವಾಗಿರುವುದರಿಂದ ಎ-1] ರತ್ನಾಕರ ನಾನು ಗಾವಡೆ, ಸಾ: ಹಬ್ಬಾನಟ್ಟಿ, ತಾ: ಖಾನಾಪೂರ, ಜಿ: ಬೆಳಗಾವಿ, ಎ-2] ದಿಲೀಪ ನಿಂಗೋ ಪಾಟೀಲ, ಸಾ: ತೋರಾಳಿ, ತಾ: ಖಾನಾಪೂರ, ಜಿ: ಬೆಳಗಾವಿ, ಎ-3] ಓಡಿ ಹೋದ ಆರೋಪಿ, ಎ-4] ಮಾರುತಿ ಸುಜುಕಿ ಕಂಪನಿಯ ಓಮ್ನಿ-ಇ ನಾಲ್ಕು ಚಕ್ರದ ವಾಹನ ಸಂಖ್ಯೆ: ಜಿಎ-01/ಜೆ-1658 ನೇದ್ದರ ಮಾಲಿಕ, ಎ-5] ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಸಂಖ್ಯೆ: ಕೆಎ-22/ಇಡಿ-5617 ನೇದ್ದರ ಮಾಲಿಕ, ಎ-6] ಹಿರೋ ಹೊಂಡಾ ಪ್ಯಾಶನ್ ದ್ಚಿಚಕ್ರ ವಾಹನ ಸಂಖ್ಯೆ: ಕೆಎ-22/ಯು-6928ನೇದ್ದರ ಮಾಲಿಕನ ವಿರುದ್ಧ ಅಬಕಾರಿ ನಿರೀಕ್ಷಕರು ಖಾನಾಪುರ ವಲಯ ರವರು ಪ್ರಕರಣ ದಾಖಲಿಸಿರುತ್ತಾರೆ.ಮುದ್ದೆಮಾಲು ಹಾಗೂ ವಾಹನಗಳ (01-ನಾಲ್ಕು ಚಕ್ರದ ಮತ್ತು 02-ದ್ವಿಚಕ್ರ ವಾಹನಗಳು) ಅಂದಾಜು ಮೌಲ್ಯ ರೂ. 587408 ರಷ್ಟಿರುತ್ತದೆ. ವರದಿ: ಮಿರ್ಜಾ ಸಲೀಮ್ ಎಸ್ ಬೇಗ