ಕರ್ನಾಟಕ ರಾಜ್ಯ ಸರ್ಕಾರದ ಆಡಳಿತದಲ್ಲಿ ಬರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದಲ್ಲಿ ಬರುವಂತಹ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇ ಹಡಗಲಿ ಬಸ್ ನಿಲ್ದಾಣವನ್ನು ಒಮ್ಮೆ ನೋಡಿದರೆ ತುಂಬಾ ಬೇಸರವಾಗುತ್ತಿದೆ. ಈ ಬಸ್ ನಿಲ್ದಾಣ ಕಳೆದ 1987 ರಲ್ಲಿ ಶ್ರೀ ಸಿದ್ದರಾಮಯ್ಯರವರ ಅದ್ಯೆಕ್ಷ್ಯೆತೆಯಲ್ಲಿ ( ಸಾರಿಗೆ ಸಚಿವರು ) ಉದ್ಘಾಟನೆ ಆಗಿತ್ತು ಆದರೇ ಈಗ ಈ ಬಸ್ ನಿಲ್ದಾಣದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲಾ ಇಲ್ಲಿ ಬಸ್ ಇದ್ದರೂ ಕೂಡಾ ಸರಿಯಾಗಿ ಬಸ್ ಗಳು ಒಳಗಡೆ ಬರುತ್ತಿಲ್ಲ ಸ್ವಚ್ಚತೆಯಂತೂ ಕೇಳಬೇಡಿ ಎಲ್ಲೆಂದರಲ್ಲಿ ಧೂಳು ಮಣ್ಣಿನಿಂದ ಕೂಡಿರುತ್ತದೆ ಬಸ್ ನಿಲ್ದಾಣದಲ್ಲಿ ಅಲ್ಲಲ್ಲಿ ಕಸ ಬಿದ್ದಿರುತ್ತದೆ ಬಸ್ ನಿಲ್ದಾಣದ ಆವರಣದಲ್ಲಿ ಕಸದ ಗಿಡಗಳು ಬೆಳೆದಿರುತ್ತವೆ ಶೌಚಾಲಯ ವಿಚಾರ ನೋಡಿದ್ರೆ ಅಯ್ಯೋ ಎನ್ನುವ ಹಾಗೇ ಇದೆ ಹೆಸರಿಗಷ್ಟೇ ಶೌಚಾಲಯ ಆದರೆ ಈ ಶೌಚಾಲಯಕ್ಕೆ ತೆರಳುವಾಗ ಮೆಟ್ಟಿಲುಗಳ ಮೇಲೆ ಕೆಲ ಕಿಡಿಗೇಡಿಗಳು ಎಲೆ ಅಡಿಕೆ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳಿರುತ್ತಾರೆ ಶೌಚಾಲಯದ 4 ಬಾಗಿಲುಗಳನ್ನು ಬಂದ್ ಮಾಡಿ ಒಂದನ್ನು ಚೀಲಕ ಹಾಕಿದ್ದಾರೆ ಅದು ಯಾವ ಕಾಲದಲ್ಲಿ ಸುಸಜ್ಜಿತವಾಗಿ ಪ್ರಯಾಣಿಕರಿಗೆ ಬಳಕೆ ಆಗುತ್ತಿತ್ತೋ ಗೊತ್ತಿಲ್ಲ ಯಾರೂ ಬಳಕೆ ಮಾಡದ ಕಾರಣ ಎಲ್ಲಾ ಕಡೆ ತುಂಬಾ ಧೂಳಿನಿಂದ ಕೂಡಿ ಜಾಡ ಕಟ್ಟಿದೆ.
ಇಲ್ಲಿ ಯಾವ ಬಸ್ ಎಷ್ಟೊತ್ತಿಗೆ ಬರುತ್ತೆ ಎಷ್ಟೊತ್ತಿಗೆ ಹೋಗಿದೆ ಎಂದು ಕೇಳಲು ಯಾವ ಸಾರಿಗೆ ನಿಯಂತ್ರಕರು ಇರುವುದಿಲ್ಲ ಇಲ್ಲಿನ ಸಾರಿಗೆ ನಿಯಂತ್ರಿಕರು ಸಂಭಂದ ಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಎಲ್ಲಿರುತ್ತಾರೋ ತಿಳಿಯುತ್ತಿಲ್ಲ.
ಇನ್ನೂ ಮೇಲಾದರೂ ಇಷ್ಟೆಲ್ಲಾ ಅವ್ಯವಸ್ಥೆಯಿಂದ ಕೂಡಿದ ಬಸ್ ನಿಲ್ದಾಣದ ಕಡೆ ಸಂಭಂದ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತಾರಾ ಕಾದು ನೋಡಬೇಕಾಗಿದೆ.
ವರದಿ : ಶಿವರಾಜ್