ಕೆಜಿಎಫ್ ಚಿತ್ರ ಬಿಡುಗಡೆಯಾಗಿ ನೂರು ದಿನ ಪೂರೈಸಿದ್ದು, ಸಾಕಷ್ಟು ದಾಖಲೆಗಳನ್ನು ಬರೆದು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವುದರ ಮೂಲಕ ಭಾರತದ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಕೆಜಿಎಫ್ ನೋಡಿದ ಸಾಕಷ್ಟು ಜನ ಕೆಜಿಎಫ್ ಚಾಪ್ಟರ್ 3 ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದರು. ಅಂತಹ ನಿರೀಕ್ಷೆಯಲ್ಲಿದ್ದವರಿಗೆ ಹಾಗೂ ಕೆಜಿಎಫ್ ಚಿತ್ರದ ಅಭಿಮಾನಿಗಳಿಗೆ ಹೊಂಬಾಳೆ ಫಿಲಮ್ಸ್ ದೊಡ್ಡ ಮಾಹಿತಿಯೊಂದನ್ನು ನೀಡಿದೆ. ಅದೇನೆಂದರೆ ನೂರು ದಿನ ಪೂರೈಸಿದ ಬೆನ್ನಲ್ಲೇ ಹೊಂಬಾಳೆ ಫಿಲಮ್ಸ್ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕೆಜಿಎಫ್ ಚಾಪ್ಟರ್ 2 ನೂರು ದಿನ ಪೂರೈಸಿರುವ ಭಾಗ್ಯ 1 ವಿಡಿಯೋವನ್ನು ಹಾಕಿದ್ದು ಅದರಲ್ಲಿ ಕೆಜಿಎಫ್ ಚಿತ್ರ ನೂರು ದಿನ ಪೂರೈಸಿರುವ ಬಗ್ಗೆ ಹಾಗೂ ಕೆಜಿಎಫ್ ಚಾಪ್ಟರ್ ೨ ನಲ್ಲಿರುವ ಕೆಲವು ತುಣುಕುಗಳನ್ನು ಹಾಕಿದೆ. ಇದೆ ವೀಡಿಯೊದಲ್ಲಿ ಕೊನೆಯಲ್ಲಿ ಇದು ಇನ್ನೂ ಆರಂಭವೆಂದು ಬರೆದಿದೆ. ಅಂದರೆ ಇದರ ಅರ್ಥ ಕೆಜಿಎಫ್ ಚಾಪ್ಟರ್ ಗಳು ಇಲ್ಲಿಗೆ ಮುಗಿದಿಲ್ಲ ಇನ್ನೂ ಮುಂದೆ ಸಾಕಷ್ಟಿವೆ ಎಂದು ಊಹಿಸಬಹುದು. ಕೆಜಿಎಫ್ ಚಿತ್ರದ 2 ಭಾಗಗಳು ಈಗಾಗಲೇ ಬಿಡುಗಡೆ ಆಗಿ ಒಳ್ಳೆ ಕಲೆಕ್ಷನ್ ಗಳನ್ನು ಸಹ ಮಾಡಿದೆ. ಬಿಡುಗಡೆಯಾಗಿರುವ 2 ಭಾಗಗಳು ಇನ್ನೂ ಆರಂಭ ಮಾತ್ರ ಇನ್ನು ಮುಂದೆ ನೋಡುವುದು ಸಾಕಷ್ಟು ಬಾಕಿ ಇದೆ ಎಂಬ ಅರ್ಥದಲ್ಲಿ ಕೆಜಿಎಫ್ ಚಿತ್ರ ಚಿತ್ರದ ನಿರೀಕ್ಷೆಯಲ್ಲಿರುವವರಿಗೆ ಹಾಗೂ ಕೆಜಿಎಫ್ ಚಿತ್ರದ ಅಭಿಮಾನಿಗಳಿಗೆ ಹೊಂಬಾಳೆ ಫಿಲಮ್ಸ್ ಈ ರೀತಿಯ ದೊಡ್ಡ ಸಂದೇಶವನ್ನು ಕೊಡುವ ಮೂಲಕ ಎಲ್ಲರಲ್ಲಿ ಸಂತಸವನ್ನು ತಂದಿದೆ. ಕೆಜಿಎಫ್ ಚಿತ್ರದ ಇನ್ನೂ ಎಷ್ಟು ಭಾಗಗಳಿವೆ ಹಾಗೂ ಯಾವಾಗ ಬಿಡುಗಡೆಯಾಗುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಹೊರಹಾಕುವ ಸಾಧ್ಯತೆಯಿದೆ. ಸದ್ಯದ ಮಟ್ಟಿಗೆ ಅಭಿಮಾನಿಗಳು ಕೆಜಿಎಫ್ ನ ಇನ್ನೂ ಸಾಕಷ್ಟು ಪಾರ್ಟ್ ಗಳು ಬರುತ್ತವೆ ಎಂದು ಮಾತ್ರ ನಿರೀಕ್ಷಿಸಬಹುದು.

error: Content is protected !!