75 ವರ್ಷದ ಮಾಜಿ ಸೈನಿಕರೊಬ್ಬರಿಗೆ ಕಿರುತೆರೆಯ ನಟಿ ಹನಿಟ್ಯಾಪ್ ಮಾಡಿ ಬರೋಬ್ಬರಿ 25 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಿರುತೆರೆ ನಟಿ ನಿತ್ಯಾ ಶಶಿ ಅನ್ನುವವರು ನಿವೃತ್ತಿ ಸೈನಿಕನಿಗೆ ಕಾಮದಾಸೆ ತೋರಿಸಿ ಬಲೆ ಬೀಸಿದ್ದಾರೆ. ಈಕೆ ಹೆಣೆದ ಬಲೆಗೆ ನಿವೃತ್ತಿ ಸೈನಿಕ ಸಿಲುಕಿಕೊಂಡು ವಿಲವಿಲ ಒದ್ದಾಡಿದ್ದಾರೆ. ಜೊತೆಗೆ 11 ಲಕ್ಷ ರೂಪಾಯಿಯನ್ನೂ ಕಳೆದುಕೊಂಡಿದ್ದಾನೆ. ಮತ್ತೆ ಹಣದ ಬೇಡಿಕೆ ಇಟ್ಟಾಗ ಅನಿವಾರ್ಯವಾಗಿ ಪೊಲೀಸರ ಸಹಾಯ ಕೇಳಿದ್ದಾನೆ. ಕೊನೆಗೂ ಪೊಲೀಸರು ನಟಿ ನಿತ್ಯಾ ಹಾಗೂ ಆಕೆಯ ಸ್ನೇಹಿತ ಬಿನು ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮನೆ ನೋಡುವ ನೆಪದಲ್ಲಿ ನಿತ್ಯಾ ಮತ್ತು ಆತನ ಸ್ನೇಹಿತ ಇಬ್ಬರೂ ನಿವೃತ್ತ ಸೈನಿಕನ ಮನೆಗೆ ಬಂದಿದ್ದಾರೆ. ವೃದ್ಧನನ್ನು ಬೆದರಿಸಿ ಬೆತ್ತಲೇ ಮಾಡಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿಂದ ಮಾಜಿ ಸೈನಿಕನನ್ನು ಬೆದರಿಸಲು ಶುರು ಮಾಡಿದ್ದಾರಂತೆ. ಕೇರಳದ ತಿರುವನಂತಪುರದ ಪಟ್ಟಂನಲ್ಲಿ ಈ ಘಟನೆ ನಡೆದಿದ್ದು, ಮಾಜಿ ಸೈನಿಕ ಕೇರಳ ವಿಶ್ವವಿದ್ಯಾಲಯದ ಮಾಜಿ ಉದ್ಯೋಗಿ ಕೂಡ ಆಗಿದ್ದಾರೆ. ನಿತ್ಯಾ ಕಿರುತೆರೆಯ ನಟಿಯಾಗಿ ಮತ್ತು ವಕೀಲೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.