ಕಲಬುರಗಿ ಜಿಲ್ಲೆ ರಾಜಾಪುರ ಬಡಾವಣೆಯ ಹೊಟೇಲ್ ಎದುರು ನಡೆದ ಭೀಕರ ಹತ್ಯೆ ಪ್ರಕರಣದಿಂದ ಇಡೀ ನಗರ ಬೆಚ್ಚಿಬಿದ್ದಿದೆ. ಮೂರು ಯುವಕರು ಸೇರಿ ರೇವಣಸಿದ್ದಪ್ಪ ಪಾಳೇಕಾರ್ (33) ಎಂಬವರನ್ನು ಕೊಲೆ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಇದೀಗ ವೈರಲ್ ಆಗುತ್ತಿದೆ.

ತಡರಾತ್ರಿ ಸುಮಾರು 2 ಗಂಟೆಗೆ, ಇಬ್ಬರು ಬೈಕ್ ಸವಾರರು ರೇವಣಸಿದ್ದಪ್ಪನನ್ನು ಎತ್ತಿಕೊಂಡು ಬಂದಿದ್ದು, ನಂತರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಈ ಘಟನೆ ಸ್ನೇಹಿತರ ಮಧ್ಯೆ ಜಗಳದಿಂದ ಉಂಟಾಗಿದೆಯೆಂಬ ಶಂಕೆ ವ್ಯಕ್ತವಾಗಿದೆ. ಸಿಗರೇಟ್ ಸೇದುವ ಸಂದರ್ಭದಲ್ಲಿ ಮಾತಿನ ಚಕಮಕಿಯಿಂದ ಗಲಾಟೆ ಆರಂಭವಾಗಿ ಕೊಲೆಯಲ್ಲಿ ಅಂತ್ಯಗೊಂಡಿರುವುದು ತಿಳಿದುಬಂದಿದೆ.

ಈ ಘಟನೆ ಸಂಬಂಧ ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

Related News

error: Content is protected !!