ಕುಂದಗೋಳ: ತಾಲೂಕಿನಾದ್ಯಂತ ಮಹಾಮಳೆಗೆ ರಸ್ತೆಗಳು, ಸೇತುವೆ ಗಳು ನೆಲಕಚ್ಚಿವೆ. ಅದರಂತೆಯೇ ತಾಲೂಕಿನ ವಿವಿಧೆಡೆ ಮನೆಗಳು ಕುಸಿದು ಜನಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಸುರಿದ ಪರಿಣಾಮ ಯರಗುಪ್ಪಿ ಗ್ರಾಮದಲ್ಲಿ ಅಂದಾಜು ಪೈಕಿ 27 ಮನೆಗಳು ಧರೆಗುಳಿದವೆ. ಶಾಸಕಿ ಕುಸುಮಾವತಿ ಶಿವಳ್ಳಿ ಬೇಟೆ ನೀಡಿ. ಯರಗುಪ್ಪಿ ಗ್ರಾಮದ ಮೃತ್ಯುಂಜಯ್ಯ ಪ್ಲಾಟ್ ಉಮಚಗಿ ರಸ್ತೆ ಕೊಂಕಣ್ಣಕುರಹಟ್ಟಿ ರಸ್ತೆ, ಪರಿಶೀಲಿಸಿ ಅಧಿಕಾರಿಗಳಿಗೆ ಸಕತ್ ಕ್ಲಾಸ್ ತೆಗದಕೂಂಡರು. ಅಣ್ಣಿಗೇರಿ, ಉಮಚಗಿ ರಸ್ತೆ ರೈತರ ಗದ್ದೆಗಳಿಗೆ ಸಮರ್ಪಕ ಕಲ್ಪಿಸುವ ರಸ್ತೆ ಮಧ್ಯೆ ಸಿಡಿ ನಿರ್ಮಾಣ ಮಾಡಬೇಕು ಎಂದು ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿ ಡಬ್ಲೂ ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಕಾಂಗ್ರೆಸ್ ಮುಖಂಡ ಅಡಿವೆಪ್ಪ ಶಿವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಮಾತನಾಡಿದ ಅವರು ಗ್ರಾಮದ ಹೊರವಲಯದ ಗಟಾರು ಸ್ವಚ್ಛತೆ, ಇಲ್ಲದೆ ಇರುವುದರಿಂದ ನೀರು ನುಗ್ಗಿ ಜಲವೃಂತಗೊಂಡಿದ್ದರು ತಾತ್ಕಾಲಿಕವಾಗಿ ಸರಿಪಡಿಸಿದೆ, ಮೃತ್ಯುಂಜಯ್ಯ ನಗರಕ್ಕೆ ನೀರು ಹರಿದು ಬಂದು ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ಕುಂಬಾರ ಓಣಿಯ ಹಲವು ಭಾಗಗಳಲ್ಲಿ ಸರ್ಮಪಕ ರಸ್ತೆ, ಇಲ್ಲದೇ ಇರುವುದು ನಿನ್ನ ಗಮನಕ್ಕೆ ಬಂದಿಲ್ಲಾವ? ಸರಕಾರಿ ಉರ್ದು ಶಾಲೆಗಳಲ್ಲಿ ನೀರು ನಿಂತರು ಗಮನ ಕೂಡದೇ ಬೇಜವಾಬ್ದಾರಿತನ ತೋರಿಸೋದು ಎಷ್ಟರಮಟ್ಟಿಗೆ ಸರಿ? ಎಂದು ಪಿಡಿಒ ಅವರಿಗೆ ತರಾಟೆಗೆ ತಗೊಂಡುರು.
ಇದೇ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರ ಆಶೋಕ ಶಿಗ್ಗಾಂವಿ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ರಾಜೇಶ ಕಿತ್ತೂರ ಇತರದ್ದಿರು
ವರದಿ: ಶಾನು ಯಲಿಗಾರ