ಹುಬ್ಬಳ್ಳಿ: ಕಳೆದ ರಾತ್ರಿ ಬಿಟ್ಟೂ ಬಿಡದೆ ಸುರಿದ ಮಳೆಯಿಂದಾಗಿ ಸಾರ್ವಜನಿಕರಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೇ ಆದ ಸಮಸ್ಯೆ ಒಂದು ಕಡೇ ಆದರೆ ಮನೆಯ ಬೀದಿ ಮತ್ತು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ ಮನೆಯಲ್ಲಿನ ನೀರು ಹೊರ ಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ ನಗರ ಪ್ರದೇಶದಲ್ಲಿನ ಚರಂಡಿಗಳು ತುಂಬಿ ರಭಸವಾಗಿ ನುಗ್ಗಿದ ಮಳೆಯ ನೀರು ರಸ್ತೆಗಳಲ್ಲೂ ಹರಿದು ಬಡಾವಣೆಗಳ ತುಂಬಾ ನೀರು ನಿಂತಿದೆ ರೋಗಿಗಳು ಹಾಗೂ ವೃದ್ಧರ ಸ್ಥಿತಿಯಂತೂ ತುಂಬಾ ತೊಂದರೆಯಾಗುತ್ತಿದೆ ಕೆಲಸ ಕಾರ್ಯಕ್ಕೆ ಹೋಗಬೇಕಾದ ಉದ್ಯೋಗಿಗಳಿಗೆ ಮನೆಯಿಂದ ಹೊರಗಡೆ ಬರಲು ತುಂಬಾ ಸಮಸ್ಯೆಯಾಗುತ್ತಿದೆ ಈ ಕೂಡಲೇ ಸಂಬಂಧ ಪಟ್ಟ ಮಹಾನಗರ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಮಳೆಯ ನೀರು ಸರಿಯಾಗಿ ಚರಂಡಿಯಲ್ಲಿ ಹೋಗುವ ಸೌಲಭ್ಯ ಕಲ್ಪಿಸಿ ಸಾರ್ವಜನಿಕರ ಮೆಚ್ಚುಗೆ ಪಡೆಯುತ್ತಾರಾ ಕಾದು ನೋಡಬೇಕಾಗಿದೆ…….. ವರದಿ : ಶಿವ ಹುಬ್ಬಳ್ಳಿ.