ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದುಗ್ಗಹಳ್ಳಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ಕೂಗೊಂದು ತಡವಾಗಿ ಕೇಳಿ ಬಂದಿದೆ.ಕಳೆದ 5 ತಿಂಗಳ ಹಿಂದೆ
ಅನುಮಾನಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮ್ರತಳ ಪತಿ ಹಾಗೂ ಆಕೆಯ ತಮ್ಮ ಇಬ್ಬರೂ ಸೇರಿ ಹತ್ಯೆ ಮಾಡಿರಬಹುದೆಂಬ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಹುಲ್ಲಹಳ್ಳಿ ಠಾಣೆ ಪೊಲೀಸರು ಕೂಡಲೇ ಈ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಬೇಕಿದೆ.
ದುಗ್ಗಹಳ್ಳಿ ಗ್ರಾಮದ ಸುಚಿತ್ರ(38) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ.ಈಕೆಯ ಪತಿ ರವಿ ಹಾಗೂ ಈಕೆಯ ತಮ್ಮ ಸತೀಶ ಸೇರಿ ಕೊಲೆ ಮಾಡಿ ಪ್ರಕರಣವನ್ನ ಮುಚ್ಚಿಹಾಕಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
5 ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಸುಚಿತ್ರಾ ಸಾವನ್ನಪ್ಪಿದ ಬಗ್ಗೆ ಹಲವಾರು ಅನುಮಾನದ ಹುತ್ತ ಎದ್ದಿದೆ.
ಸುಮಾರು 15 ವರ್ಷಗಳ ಹಿಂದೆ ದುಗ್ಗಹಳ್ಳಿ ಗ್ರಾಮದ ಸುಚಿತ್ರಾಳನ್ನ ಏಚಗುಂಡ್ಲ ಗ್ರಾಮದ ಸೋದರ ಮಾವ ರವಿ ಜೊತೆ ಅದ್ದೂರಿಯಾಗಿ ವಿವಾಹ ಮಾಡಿಕಕೊಡಲಾಗಿತ್ತು.
ದಂಪತಿಗೆ ಇಬ್ಬರು ಮಕ್ಕಳೂ ಸಹ ಇದ್ದಾರೆ.ಮೂರ್ನಾಲ್ಕು ವರ್ಷಗಳಿಂದ ಸುಚಿತ್ರಾ ನಡತೆಯ ಬಗ್ಗೆ ಪತಿ ರವಿಗೆ ಅನುಮಾನ ಬಂದಿದ್ದು ಪಕ್ಕದ ಬಡಾವಣೆಯ ಅನ್ಯಕೋಮಿನ ವಿವಾಹಿತ ವ್ಯಕ್ತಿಯೊಂದಿಗೆ ಅಕ್ರಮ ಸಂಪರ್ಕ ಇಟ್ಟುಕೊಂಡಿರುವ ಮಾಹಿತಿ ಪತಿ ರವಿಗೆ ತಿಳಿದು ಬಂದಿದೆ ಎನ್ನ ಲಾಗಿದ್ದು .
ಈ ವಿಚಾರವನ್ನ ರವಿ ತನ್ನ ಭಾವಮೈದ ಸತೀಶ್ ಜೊತೆ ಹೇಳಿಕೊಂಡಿದ್ದಾನೆ. ಕೆಲವು ದಿನಗಳ ಕಾಲ ಸುಚಿತ್ರಾಳನ್ನ ಫಾಲೋ ಮಾಡಿದ ಪತಿ ಹಾಗೂ ತಮ್ಮನಿಗೆ ಅನ್ಯಕೋಮಿನ ಪುರುಷನ ಜೊತೆ ಅಕ್ರಮ ಸಂಬಂಧ ಇರುವುದು ಖಚಿತವಾಗಿದೆ.
ಈ ಕಾರಣಕ್ಕಾಗಿ ರವಿ ತನ್ನ ಪತ್ನಿ ಸುಚಿತ್ರ ಹಾಗೂ ಮಕ್ಕಳನ್ನ ಭಾವಮೈದ ಸತೀಶನ ಮನೆ ದುಗ್ಗಹಳ್ಳಿಗೆ ಕರೆದುಕೊಂಡು ಹೋಗಿದ್ದಾನೆ
.22-07-2024 ರಂದು ಸತೀಶ ಹೊಸದಾಗಿ ನಿರ್ಮಿಸಿರುವ ಕೋಳಿಫಾರಂ ನಲ್ಲಿ ಸುಚಿತ್ರ ಅನುಮಾನಾಸ್ಪದವಾಗಿ ಸಾವನ್ನಪ್ಪಿರುತ್ತಾಳೆ .
ಈ ವಿಚಾರವನ್ನ ಪೊಲೀಸರಿಗೂ ತಿಳಿಸದೆ ಗ್ರಾಮಸ್ಥರ ಗಮನಕ್ಕೂ ತರದೆ ಏಕಾ ಏಕಿ ಮೃತದೇಹವನ್ನ ಏಚಗುಂಡ್ಲ ಗ್ರಾಮಕ್ಕೆ ಕೊಂಡೊಯ್ದು ತರಾತುರಿಯಲ್ಲಿ ಅಂತ್ಯಕ್ರಿಯೆ ಮಾಡಿ ಕೈತೊಳೆದುಕೊಂಡಿದ್ದಾರೆ.
ಆರಂಭದಲ್ಲಿ ಕಿಂಚಿತ್ತು ಸುಳಿವು ನೀಡದ ಸತೀಶ ಕೆಲವು ದಿನಗಳ ನಂತರ ರಾಜಾರೋಷವಾಗಿ ನಾನೆ ಸಾಯಿಸಿದ್ದೀನಿ ಎಂದು ಹೇಳಿಕೊಂಡು ತಿರುಗಾಡುತ್ತಿರುವುದು ಗ್ರಾಮದ ಜನರ ಕಿವಿಗೆ ಬಿದ್ದಿದೆ
ಸುಚಿತ್ರಾ ಆರೋಗ್ಯವಾಗಿದ್ದರೂ ಸಾವನ್ನಪ್ಪಿದ್ದು ಹೇಗೆ ? ಎಂಬ ಪ್ರಶ್ನೆ ಈಗ ಸ್ಥಳೀಯರದಾಗಿದ್ದು.ಆತ್ಮಹತ್ಯೆ ಆಗಿದ್ದಲ್ಲಿ ಪೊಲೀಸರಿಗೂ ತಿಳಿಸದೆ ತರಾತುರಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದು ಏಕೆ..? ಗ್ರಾಮದ ಜನತೆಯನ್ನ ದೂರವಿರಿಸಿ ಮೃತದೇಹವನ್ನ ಸುಟ್ಟು ಹಾಕಿರುವುದು ಏಕೆ ಎಂಬ ಅನುಮಾನಗಳಿಗೆ ಪುಷ್ಠಿ ನೀಡುತ್ತಿದೆ.
ಈ ಸಾವಿಗೆ ಹೆತ್ತ ಪೋಷಕರಾದ ಶಿವರಾಜಪ್ಪ,ಪ್ರೇಮ ರವರ ಪಾತ್ರವೂ ಇದೆ ಎಂದು ಹೇಳಲಾಗುತ್ತಿದೆ.
ಅನ್ಯಕೋಮಿನ ವ್ಯಕ್ತಿಯೊಡನೆ ಅಕ್ರಮ ಸಂಬಂಧ ಬೆಳೆಸಿದ್ದೇ ಸುಚಿತ್ರ ಸಾವಿಗೆ ಕಾರಣವಾಯ್ತೇ…? ತರಾತುರಿಯಲ್ಲಿ ಅಂತ್ಯೆಕ್ರಿಯೆ ನಡೆಸಿದ್ದಾದರೂ ಏಕೆ..?ರಾಜಾರೋಷವಾಗಿ ತಾನೇ ಕೊಲೆ ಮಾಡಿರುವುದಾಗಿ ಹೇಳುತ್ತಿರುವ ಸತೀಶನ ಇಂಗಿತವಾದರೂ ಏನು…? ಇವೆಲ್ಲಾ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.
ಆದಷ್ಟೂ ಶೀಘ್ರದಲ್ಲಿ ಮೃತಳ ತಮ್ಮ ಸತೀಶ ಹಾಗೂ ಪತಿ ರವಿಯನ್ನ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರೆ ಹತ್ಯೆಯ ಪ್ರಕರಣ ಬೆಳಕಿಗೆ ಬರುತ್ತದೆ ಎಂಬುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವರದಿ: ಮೋಹನ್

Leave a Reply

Your email address will not be published. Required fields are marked *

Related News

error: Content is protected !!