ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಮದ್ಯೆ ಪ್ರೀತಿಯ ಹಿನ್ನಲೆಯಲ್ಲಿ ಜಗಳಕ್ಕೆ ತಿರುಗಿದೆ ಈ ಪ್ರಕರಣದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಹುಬ್ಬಳ್ಳಿಯ ಕಾರ್ಪೊರೇಟರ್ ಮಗಳ ಬರ್ಬರ ಕೊಲೆ ಆಗಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಹಾಗೂ ಸ್ಥಳೀಯರ ಸಹಾಯದಿಂದ ಘಟನೆ ನಡೆದ ಕೆಲವೇ ಸಮಯದಲ್ಲಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಸವದತ್ತಿ ಮೂಲದ ಫಯಾಜ್ ಎಂಬ ಯುವಕನನ್ನು ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿದ್ದಾರೆ ಹುಬ್ಬಳ್ಳಿಯ ಬಿ,ವ್ಹಿ,ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೇಹಾ ಹಿರೇಮಠ್ ಎಮ್ ಸಿ ಎ ವ್ಯಾಸಂಗ ಮಾಡುತ್ತಿದ್ದಳು, ಅದೇ ಕಾಲೇಜಿನಲ್ಲಿ ಸವದತ್ತಿ ಮೂಲದ ಫಯಾಜ್ ಬಿ ಸಿ ಎ ವ್ಯಾಸಂಗ ಮಾಡುತ್ತಿದ್ದ ಇಬ್ಬರೂ ಒಂದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದರು .
ಇದ್ದಕ್ಕಿದ್ದಂತೆ ಇಂದು ಸಾಯಂಕಾಲ ಬಿ ವ್ಹಿ ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಫಯಾಜ್ ಒಮ್ಮೆಲೇ ನೇಹಾ ಹಿರೇಮಠ್ ಳ ಮೇಲೆ ಏಕಾಏಕಿ ದಾಳಿ ಮಾಡಿದ್ದು ನೇಹಾಳ ದೇಹದ ಮೇಲೆ ಸುಮಾರು ಒಂಬತ್ತು ಬಾರಿ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾದ ಫಯಾಜ್ ಇತ್ತೀಚಿನ ದಿನಗಳಲ್ಲಿ ನೇಹಾಳಿಗೆ ನಾ ನಿನ್ನನ್ನ ಪ್ರೀತಿಸುತ್ತಿದ್ದೇನೆ ನೀನೂ ನನ್ನ ಪ್ರೀತಿಸು ಎಂದು ಬೆನ್ನು ಬಿದ್ದಿದ್ದ ಆದರೇ ನೇಹಾ ಇದೂ ಯಾವುದು ನನ್ನ ಮುಂದೆ ನಡಿಯಲ್ಲ ನೀನು ಬೇರೆ ಯಾರನ್ನಾದರೂ ನೋಡಿಕೋ ಎಂದು ಹೇಳಿ ವಿರೋಧಿಸಿದ್ದಳು ಈ ಪ್ರೀತಿಯ ಹಿನ್ನಲೆಯಲ್ಲಿ ಫಯಾಜ್ ನೇಹಾ ಳ ಕೊಲೆ ಮಾಡಿದ್ದಾನಾ ಎಂಬ ಶಂಕೆ ಬಂದಿರುತ್ತದೆ ಇನ್ನೂ ಹುಬ್ಬಳ್ಳಿಯ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾ ಹಿರೇಮಠ್ ಳ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಫಯಾಜ್ ನನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ: ಶಿವ ಹುಬ್ಬಳ್ಳಿ.