ಬೆಂಗಳೂರು ನೆಲಗದರನಹಳ್ಳಿಯಲ್ಲಿ ಪತಿ ಪತ್ನಿಯ ಸೌಂದರ್ಯ ಕುರಿತು ಟೀಕಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಪತಿ ಪುಲಿ ಸಾಯಿಕುಮಾರ್ ಪತ್ನಿಯ ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅವಳ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ ಎಂದು ದೂರಿಸಲಾಗಿದೆ.
ಪತ್ನಿ ಈ ಕುರಿತು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ಪದೇ ಪದೇ ಸೌಂದರ್ಯ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾ, ಗಲಾಟೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಪತ್ನಿಯ ಮೇಲೆ ಮಾತ್ರವಲ್ಲದೆ ಮಗ ಮತ್ತು ಅವಳ ತಂದೆ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2021ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪರಿಚಿತರಾದ ಜೋಡಿ ನಂತರ ವಿವಾಹವಾಗಿ, ದಾಂಪತ್ಯ ಜೀವನ ಆರಂಭಿಸಿದರು. ಪತ್ನಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದು, ಪತಿ ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿದ್ದಾರೆ. ಮದುವೆಯಾದ ನಂತರದಿಂದಲೇ ವರದಕ್ಷಿಣೆಗಾಗಿ ಪೀಡನೆ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಸಂಬಂಧ ಪುಲಿ ಸಾಯಿಕುಮಾರ್ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೊಪ್ಪಳದ ಗಂಗಾವತಿ ಬಳಿ ನಡೆದ ವಿದೇಶಿ ಮಹಿಳೆ ಹಾಗೂ ಹೋಮ್ಸ್ಟೇ ಮಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ…
ಅರಸೀಕೆರೆ ರೈಲ್ವೆ ಪೊಲೀಸರು ತೀವ್ರ ತನಿಖೆ ನಡೆಸಿ, ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಹತ್ಯೆ…
ಖಾಸಗಿ ಆಸ್ಪತ್ರೆಯ ದುಬಾರಿ ಬಿಲ್ ನೋಡಿ, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಮ್ಲಜನಕ ಮಾಸ್ಕ್ ಸಮೇತ ಆಸ್ಪತ್ರೆಯಿಂದ ಹೊರಗೆ ಬಂದು…
ಹ್ಯೂಸ್ಟನ್ನಿಂದ ಫೀನಿಕ್ಸ್ಗೆ ತೆರಳುತ್ತಿದ್ದ ಸೌತ್ ವೆಸ್ಟ್ ಏರ್ಲೈನ್ಸ್ ಫ್ಲೈಟ್ 733ನಲ್ಲಿ ನಡೆದ ಅಹಿತಕರ ಘಟನೆಯಿಂದ ಪ್ರಯಾಣಿಕರು ತೀವ್ರ ಆತಂಕ ಅನುಭವಿಸಿದರು.…
ಗುರುವಾರ (ಮಾರ್ಚ್ 7) ರಾತ್ರಿ 11 ರಿಂದ 11:30ರ ನಡುವೆಯೇ ಭಯಾನಕ ಘಟನೆ ನಡೆದಿದೆ. 27 ವರ್ಷದ ಇಸ್ರೇಲಿ ಯುವತಿ…
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಇತ್ತೀಚೆಗೆ ನೀಡಿದ ಹೇಳಿಕೆ ಹೊಸ ಚರ್ಚೆಗೆ ತುತ್ತಾಗಿದೆ. ಸುದ್ದಿ ಸಂಸ್ಥೆ ಎಎನ್ಐ ಜೊತೆಗಿನ ಸಂದರ್ಶನದಲ್ಲಿ…