
ಮದುವೆಗೆ ಒಪ್ಪಿಕೊಂಡ ಹೆಂಡತಿ, ಆದರೆ ಮಕ್ಕಳನ್ನು ಮಾಡಿಕೊಳ್ಳಲು ನಿರಾಕರಿಸಿದ್ದಾಳೆ ಎಂದು ಗಂಡನಿಂದ ಪೊಲೀಸರಿಗೆ ದೂರು. ಈ ಪ್ರಕರಣದಲ್ಲಿ ಗಂಡನ ಆರೋಪಗಳ ಹಿಂದಿನ ನೀಚ ರಾಜಕೀಯವನ್ನು ತಾನೇ ಬಯಲಿಗೆಳೆದಿದ್ದಾಳೆ ಎಂದು ಹೆಂಡತಿ ಪ್ರತಿಪಾದಿಸಿದ್ದಾಳೆ.
ಗಂಡನ ಸುಳ್ಳು ನಾಟಕ – ಹೆಂಡತಿಯ ಪ್ರತಿಕ್ರಿಯೆ
ಅತುಲ್ ಸುಭಾಶ್ ಕಥೆಯಲ್ಲಿ, ಕಂಜೂಸ ಗಂಡನಿಂದ ಬಲಾತ್ಕಾರಿತ ಜೀವನ ನಡೆಸುತ್ತಿರುವೆ ಎಂದು ಹೆಂಡತಿ ಬಿಂದುಶ್ರೀ ತನ್ನ ಅಳಲು ತೋಡಿಕೊಂಡಿದ್ದಾರೆ. “ನಾವು ಮದುವೆಯಾಗಿದ್ದು ಎರಡು ವರ್ಷಗಳಾದರೂ, ಈಗ ನನ್ನ ಗಂಡ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ,” ಎಂದು ಆಕೆ ಹೇಳಿದ್ದಾರೆ.
“ಗಂಡನಿಗೆ ಹೆಣ್ಮಕ್ಕಳ ಜೀವನದಲ್ಲಿ ಏನು ಬೇಕೋ ಗೊತ್ತಿಲ್ಲ. ಅವರ ಬುದ್ಧಿಯನ್ನೇ ನಾನು ಅರಿಯಲು ಸಾಧ್ಯವಿಲ್ಲ. ಆಡಿಯೋ, ವಿಡಿಯೋ ಎಡಿಟ್ ಮಾಡಿ ನನ್ನ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಹೆಂಡತಿಯ ಗಂಭೀರ ಆರೋಪಗಳು
- “ನನ್ನ ತಂದೆ ತಾಯಿ 40 ಲಕ್ಷ ರೂ. ಕೊಡಿಸಿ ಮದುವೆ ಮಾಡಿಸಿದ್ದಾರೆ. ಆದರೆ ಗಂಡನ ಮನೆಯಲ್ಲಿ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ,” ಎಂದು ಬಿಂದುಶ್ರೀ ಆರೋಪಿಸಿದ್ದಾರೆ.
- “ದಿನಕ್ಕೆ ಮೂರು ಹೊತ್ತೂ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಅದೇ ಕಾರಣಕ್ಕೆ ನಾನು ತವರು ಮನೆಗೆ ಹೋಗಿ ಬರುತ್ತಿದ್ದೆ. ಆದರೆ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ” ಎಂದು ಆಕೆ ಹೇಳಿದ್ದಾರೆ.
- “ನಾನು ಗಂಡನಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಆದರೆ ಅವರು ನನಗೆ ತಿರುಗಿ ಹೊಡೆದು, ಬಡಿದು, ಕಿರುಕುಳ ನೀಡುತ್ತಿದ್ದರು. ಇದನ್ನೆಲ್ಲ ನಾನು ಸಹಿಸಿಕೊಂಡೆ,” ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸಹನೀಯ ಮನೆಯ ಪರಿಸ್ಥಿತಿ
- “ಗಂಡನ ಮನೆಯಲ್ಲಿ ಕೇವಲ ಅರ್ಧ ಲೀಟರ್ ಹಾಲು ಖರ್ಚು ಮಾಡಬೇಕು. ಅಕ್ಕಿಯನ್ನು ನಿರ್ಧಿಷ್ಟ ಪ್ರಮಾಣಕ್ಕಿಂತ ಜಾಸ್ತಿ ಹಾಕಿ ಅಡುಗೆ ಮಾಡಿದರೆ ತಿರುಗಿ ಬೈಯ್ಯುತ್ತಿದ್ದರು,” ಎಂದು ಆಕೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
- “ತರಕಾರಿಯಿಲ್ಲದೆ ಅಡುಗೆ ಮಾಡಬೇಕಿತ್ತು. ಎರಡು ಟೊಮೇಟೋ ಹಾಕಿ ಸಾರು ಮಾಡು, ಎಂದು ಹೇಳಿದರು,” ಎಂದು ಆಕೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
- ಈ ಕುರಿತು ಪೂರಕ ಸಾಕ್ಷ್ಯಗಳೊಂದಿಗೆ ತಾವು ಪೊಲೀಸರಿಗೆ ದೂರು ನೀಡಲು ಸಿದ್ಧವಿದ್ದೇವೆ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.
ಗಂಡ – ಠಾಣೆಗೆ ಹಾಜರಾಗದೆ, ಮೀಡಿಯಾ ಎದುರು
ಗಂಡ ಶ್ರೀಕಾಂತ್ ಪೊಲೀಸರಿಗೆ ದೂರು ನೀಡಿದರೂ, ತನಿಖೆಗೆ ಸಹಕರಿಸದೆ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಂದುಶ್ರೀ ಆರೋಪಿಸಿದ್ದಾರೆ. “ನಾನು ಮ್ಯೂಚುವಲ್ ಡಿವೋರ್ಸ್‌ಗೆ ಸಿದ್ಧವಿದ್ದೇನೆ. ಆದರೆ ಅವರು ಠಾಣೆಗೆ ಬರುವುದನ್ನೇ ತಪ್ಪಿಸುತ್ತಿದ್ದಾರೆ” ಎಂದು ಆಕೆ ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.