Latest

ಮಲಗೋಕೆ ಹಣ ಕೇಳ್ತಾಳೆ, ಮಕ್ಕಳು ಬೇಡ ಅಂತಾಳೆ ಎಂದು ದೂರಿದ ಗಂಡ; ಗಂಡನ ಕಂಜೂಸ್ ಬುದ್ದಿ ಬಿಚ್ಚಿಟ್ಟ ಹೆಂಡತಿ…!

ಮದುವೆಗೆ ಒಪ್ಪಿಕೊಂಡ ಹೆಂಡತಿ, ಆದರೆ ಮಕ್ಕಳನ್ನು ಮಾಡಿಕೊಳ್ಳಲು ನಿರಾಕರಿಸಿದ್ದಾಳೆ ಎಂದು ಗಂಡನಿಂದ ಪೊಲೀಸರಿಗೆ ದೂರು. ಈ ಪ್ರಕರಣದಲ್ಲಿ ಗಂಡನ ಆರೋಪಗಳ ಹಿಂದಿನ ನೀಚ ರಾಜಕೀಯವನ್ನು ತಾನೇ ಬಯಲಿಗೆಳೆದಿದ್ದಾಳೆ ಎಂದು ಹೆಂಡತಿ ಪ್ರತಿಪಾದಿಸಿದ್ದಾಳೆ.

ಗಂಡನ ಸುಳ್ಳು ನಾಟಕ – ಹೆಂಡತಿಯ ಪ್ರತಿಕ್ರಿಯೆ

ಅತುಲ್ ಸುಭಾಶ್ ಕಥೆಯಲ್ಲಿ, ಕಂಜೂಸ ಗಂಡನಿಂದ ಬಲಾತ್ಕಾರಿತ ಜೀವನ ನಡೆಸುತ್ತಿರುವೆ ಎಂದು ಹೆಂಡತಿ ಬಿಂದುಶ್ರೀ ತನ್ನ ಅಳಲು ತೋಡಿಕೊಂಡಿದ್ದಾರೆ. “ನಾವು ಮದುವೆಯಾಗಿದ್ದು ಎರಡು ವರ್ಷಗಳಾದರೂ, ಈಗ ನನ್ನ ಗಂಡ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ,” ಎಂದು ಆಕೆ ಹೇಳಿದ್ದಾರೆ.

“ಗಂಡನಿಗೆ ಹೆಣ್ಮಕ್ಕಳ ಜೀವನದಲ್ಲಿ ಏನು ಬೇಕೋ ಗೊತ್ತಿಲ್ಲ. ಅವರ ಬುದ್ಧಿಯನ್ನೇ ನಾನು ಅರಿಯಲು ಸಾಧ್ಯವಿಲ್ಲ. ಆಡಿಯೋ, ವಿಡಿಯೋ ಎಡಿಟ್ ಮಾಡಿ ನನ್ನ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಹೆಂಡತಿಯ ಗಂಭೀರ ಆರೋಪಗಳು

  • “ನನ್ನ ತಂದೆ ತಾಯಿ 40 ಲಕ್ಷ ರೂ. ಕೊಡಿಸಿ ಮದುವೆ ಮಾಡಿಸಿದ್ದಾರೆ. ಆದರೆ ಗಂಡನ ಮನೆಯಲ್ಲಿ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ,” ಎಂದು ಬಿಂದುಶ್ರೀ ಆರೋಪಿಸಿದ್ದಾರೆ.
  • “ದಿನಕ್ಕೆ ಮೂರು ಹೊತ್ತೂ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಅದೇ ಕಾರಣಕ್ಕೆ ನಾನು ತವರು ಮನೆಗೆ ಹೋಗಿ ಬರುತ್ತಿದ್ದೆ. ಆದರೆ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ” ಎಂದು ಆಕೆ ಹೇಳಿದ್ದಾರೆ.
  • “ನಾನು ಗಂಡನಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಆದರೆ ಅವರು ನನಗೆ ತಿರುಗಿ ಹೊಡೆದು, ಬಡಿದು, ಕಿರುಕುಳ ನೀಡುತ್ತಿದ್ದರು. ಇದನ್ನೆಲ್ಲ ನಾನು ಸಹಿಸಿಕೊಂಡೆ,” ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸಹನೀಯ ಮನೆಯ ಪರಿಸ್ಥಿತಿ

  • “ಗಂಡನ ಮನೆಯಲ್ಲಿ ಕೇವಲ ಅರ್ಧ ಲೀಟರ್ ಹಾಲು ಖರ್ಚು ಮಾಡಬೇಕು. ಅಕ್ಕಿಯನ್ನು ನಿರ್ಧಿಷ್ಟ ಪ್ರಮಾಣಕ್ಕಿಂತ ಜಾಸ್ತಿ ಹಾಕಿ ಅಡುಗೆ ಮಾಡಿದರೆ ತಿರುಗಿ ಬೈಯ್ಯುತ್ತಿದ್ದರು,” ಎಂದು ಆಕೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
  • “ತರಕಾರಿಯಿಲ್ಲದೆ ಅಡುಗೆ ಮಾಡಬೇಕಿತ್ತು. ಎರಡು ಟೊಮೇಟೋ ಹಾಕಿ ಸಾರು ಮಾಡು, ಎಂದು ಹೇಳಿದರು,” ಎಂದು ಆಕೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
  • ಈ ಕುರಿತು ಪೂರಕ ಸಾಕ್ಷ್ಯಗಳೊಂದಿಗೆ ತಾವು ಪೊಲೀಸರಿಗೆ ದೂರು ನೀಡಲು ಸಿದ್ಧವಿದ್ದೇವೆ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

ಗಂಡ – ಠಾಣೆಗೆ ಹಾಜರಾಗದೆ, ಮೀಡಿಯಾ ಎದುರು

ಗಂಡ ಶ್ರೀಕಾಂತ್ ಪೊಲೀಸರಿಗೆ ದೂರು ನೀಡಿದರೂ, ತನಿಖೆಗೆ ಸಹಕರಿಸದೆ ಮಾಧ್ಯಮಗಳಲ್ಲಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಂದುಶ್ರೀ ಆರೋಪಿಸಿದ್ದಾರೆ. “ನಾನು ಮ್ಯೂಚುವಲ್ ಡಿವೋರ್ಸ್‌ಗೆ ಸಿದ್ಧವಿದ್ದೇನೆ. ಆದರೆ ಅವರು ಠಾಣೆಗೆ ಬರುವುದನ್ನೇ ತಪ್ಪಿಸುತ್ತಿದ್ದಾರೆ” ಎಂದು ಆಕೆ ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

7 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ- ಬಳ್ಳಾರಿಯಲ್ಲಿ ಬಿಜೆಪಿ ಮುಖಂಡ ಅರೆಸ್ಟ್..!

ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬಿಜೆಪಿ ಯುವ ಮುಖಂಡ ದೇವು ನಾಯಕ್ (Devu Nayak) ಮೇಲೆ…

27 minutes ago

39ನೇ ವಯಸ್ಸಿನಲ್ಲಿ ಅಜ್ಜಿಯಾಗಿರುವ ಚೀನಾದ ಮಹಿಳೆ! ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಅಜ್ಜಿ ಎಂದರೆ ನಮ್ಮ ಕಣ್ಣಿಗೆ ಮೂಡುವ ಚಿತ್ರಣವು 60 ವರ್ಷ ಮೇಲ್ಪಟ್ಟ, ಬೆಳ್ಳಿ ಕೂದಲಿನ ಮಹಿಳೆ. ಆದರೆ, 39ನೇ ವಯಸ್ಸಿನಲ್ಲಿ…

31 minutes ago

ನಾಗ್ಪುರ ಹಿಂಸಾಚಾರ: ಮಹಿಳಾ ಪೊಲೀಸರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಜನರ ಬಂಧನ

ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಬಳಿಕ ಮಹಾರಾಷ್ಟ್ರ ಪೊಲೀಸರು ತೀವ್ರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ (FIR) ಪ್ರತಿಗಳು ಬಹಿರಂಗಗೊಂಡಿದ್ದು,…

34 minutes ago

ಮಂಡ್ಯ ಅನಾಥಾಶ್ರಮ ವಿಷಾಹಾರ ಪ್ರಕರಣ: ತನಿಖೆ ಚುರುಕು, ಹೋಟೆಲ್ ಮಾಲೀಕನ ಮೇಲಿನ ದ್ವೇಷವೇ ಕಾರಣ?

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅನಾಥಾಶ್ರಮದಲ್ಲಿ ವಿಷಾಹಾರ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಹೊಸ ತಿರುವು ದೊರಕಿದೆ. ಆಹಾರ…

36 minutes ago

ಮೀನು ಕದ್ದ ಆರೋಪ: ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆಗೆ ಅಮಾನುಷ ಹಲ್ಲೆ – ನಾಲ್ವರು ಬಂಧನ

ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನು ಕಳವು ಆರೋಪ ಮಾಡಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ…

43 minutes ago

ಅನ್ನಭಾಗ್ಯ ಅಕ್ಕಿ ಕೊಡದಿದ್ದರೆ 1967ಕ್ಕೆ ಕರೆ ಮಾಡಿ

ಕಾರವಾರ : 2025ರ ಫೆಬ್ರವರಿ ಹಾಗೂ ಮಾರ್ಚ ತಿಂಗಳ ಅಕ್ಕಿಯನ್ನು ಸರ್ಕಾರ ಒಟ್ಟಿಗೆ ಕೊಡಲು ನಿರ್ಧರಿಸಿದ್ದು, ಪಡಿತರ ಅಂಗಡಿಯಲ್ಲಿ ಅಕ್ಕಿ…

53 minutes ago