ಬೆಳಗಾವಿಯಲ್ಲಿ ಗಂಡನ ಮೋಸದೊಂದು ಪ್ರಕರಣ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಸುಳದಾಳ ಗ್ರಾಮದ ಯಲ್ಲಪ್ಪ ಮುಸಲ್ಮಾರಿ, ಮನೆಯವರ ವಿರೋಧದ ನಡುವೆಯೇ ಮಹಿಳೆಯೊಂದಿಗಿಳಿ ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಾದ ಬಳಿಕ ದಂಪತಿಗೆ ಮೂರು ಮಕ್ಕಳು ಕೂಡ ಜನಿಸಿದರು.

ಆದರೆ, ಸಮಯ ಕಳೆದಂತೆ ಯಲ್ಲಪ್ಪನ ನಿಜವಾದ ಬಣ್ಣ ಬಹಿರಂಗವಾಯಿತು. ಮೂರು ಮಕ್ಕಳ ತಂದೆಯಾಗಿರುವ ಯಲ್ಲಪ್ಪ, ಇದೀಗ ಮತ್ತೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆ. ಪತಿ ತೊರೆದು ಹೋದ ನಂತರ, ಮೊದಲ ಪತ್ನಿ ಸಂಕಷ್ಟದಲ್ಲಿ ಮುಳುಗಿದ್ದಾಳೆ. ಜೀವನ ಸಾಗಿಸೋದು ಮಾತ್ರವಲ್ಲ, ಮಕ್ಕಳಿಗೆ ಶಿಕ್ಷಣ ನೀಡುವುದು ಕೂಡಾ ಅವಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ನಡುವೆ, ಅಪಘಾತಕ್ಕೊಳಗಾದ ಮೊದಲ ಪತ್ನಿಗೆ ಆರೋಗ್ಯ ಸಮಸ್ಯೆಗಳೂ ಎದುರಾಗಿವೆ. ಆರ್ಥಿಕ ತೊಂದರೆ ಎದುರಿಸುತ್ತಾ, ಮಕ್ಕಳ ಭವಿಷ್ಯಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಈ ಮಹಿಳೆ, ರೈಲ್ವೆ ನಿಲ್ದಾಣದಲ್ಲಿ ಪಾವ್ ಬಜಿ ಹಾಗೂ ಚಹಾ ಮಾರುವ ಮೂಲಕ ಜೀವನ ಸಾಗಿಸುತ್ತಿದ್ದಳು. ಆದರೆ ಈಗ, ಭಾರವಾದ ಕೆಲಸ ಮಾಡುವುದು ಕಷ್ಟವಾಗಿರುವ ಕಾರಣ, ಪತಿ ತಾನು ಹಾಗೂ ಮಕ್ಕಳನ್ನು ತೊರೆದು ಹೋದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಪೊಲೀಸ್‌ ಠಾಣೆಗೆ ಶರಣಾಗಿದ್ದಾಳೆ.

ಈಕೆ ಅನುಭವಿಸುತ್ತಿರುವ ಸಂಕಷ್ಟಗಳಿಗೆ ನ್ಯಾಯ ದೊರಕಬೇಕೆಂಬುದು ಆಕೆಯ ಅಪೇಕ್ಷೆ.

Leave a Reply

Your email address will not be published. Required fields are marked *

Related News

error: Content is protected !!