ಬೆಳಗಾವಿಯಲ್ಲಿ ಗಂಡನ ಮೋಸದೊಂದು ಪ್ರಕರಣ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಸುಳದಾಳ ಗ್ರಾಮದ ಯಲ್ಲಪ್ಪ ಮುಸಲ್ಮಾರಿ, ಮನೆಯವರ ವಿರೋಧದ ನಡುವೆಯೇ ಮಹಿಳೆಯೊಂದಿಗಿಳಿ ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಾದ ಬಳಿಕ ದಂಪತಿಗೆ ಮೂರು ಮಕ್ಕಳು ಕೂಡ ಜನಿಸಿದರು.
ಆದರೆ, ಸಮಯ ಕಳೆದಂತೆ ಯಲ್ಲಪ್ಪನ ನಿಜವಾದ ಬಣ್ಣ ಬಹಿರಂಗವಾಯಿತು. ಮೂರು ಮಕ್ಕಳ ತಂದೆಯಾಗಿರುವ ಯಲ್ಲಪ್ಪ, ಇದೀಗ ಮತ್ತೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆ. ಪತಿ ತೊರೆದು ಹೋದ ನಂತರ, ಮೊದಲ ಪತ್ನಿ ಸಂಕಷ್ಟದಲ್ಲಿ ಮುಳುಗಿದ್ದಾಳೆ. ಜೀವನ ಸಾಗಿಸೋದು ಮಾತ್ರವಲ್ಲ, ಮಕ್ಕಳಿಗೆ ಶಿಕ್ಷಣ ನೀಡುವುದು ಕೂಡಾ ಅವಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ನಡುವೆ, ಅಪಘಾತಕ್ಕೊಳಗಾದ ಮೊದಲ ಪತ್ನಿಗೆ ಆರೋಗ್ಯ ಸಮಸ್ಯೆಗಳೂ ಎದುರಾಗಿವೆ. ಆರ್ಥಿಕ ತೊಂದರೆ ಎದುರಿಸುತ್ತಾ, ಮಕ್ಕಳ ಭವಿಷ್ಯಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಈ ಮಹಿಳೆ, ರೈಲ್ವೆ ನಿಲ್ದಾಣದಲ್ಲಿ ಪಾವ್ ಬಜಿ ಹಾಗೂ ಚಹಾ ಮಾರುವ ಮೂಲಕ ಜೀವನ ಸಾಗಿಸುತ್ತಿದ್ದಳು. ಆದರೆ ಈಗ, ಭಾರವಾದ ಕೆಲಸ ಮಾಡುವುದು ಕಷ್ಟವಾಗಿರುವ ಕಾರಣ, ಪತಿ ತಾನು ಹಾಗೂ ಮಕ್ಕಳನ್ನು ತೊರೆದು ಹೋದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ.
ಈಕೆ ಅನುಭವಿಸುತ್ತಿರುವ ಸಂಕಷ್ಟಗಳಿಗೆ ನ್ಯಾಯ ದೊರಕಬೇಕೆಂಬುದು ಆಕೆಯ ಅಪೇಕ್ಷೆ.
ಮದುವೆಗೆ ಒಪ್ಪಿಕೊಂಡ ಹೆಂಡತಿ, ಆದರೆ ಮಕ್ಕಳನ್ನು ಮಾಡಿಕೊಳ್ಳಲು ನಿರಾಕರಿಸಿದ್ದಾಳೆ ಎಂದು ಗಂಡನಿಂದ ಪೊಲೀಸರಿಗೆ ದೂರು. ಈ ಪ್ರಕರಣದಲ್ಲಿ ಗಂಡನ ಆರೋಪಗಳ…
ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬಿಜೆಪಿ ಯುವ ಮುಖಂಡ ದೇವು ನಾಯಕ್ (Devu Nayak) ಮೇಲೆ…
ಅಜ್ಜಿ ಎಂದರೆ ನಮ್ಮ ಕಣ್ಣಿಗೆ ಮೂಡುವ ಚಿತ್ರಣವು 60 ವರ್ಷ ಮೇಲ್ಪಟ್ಟ, ಬೆಳ್ಳಿ ಕೂದಲಿನ ಮಹಿಳೆ. ಆದರೆ, 39ನೇ ವಯಸ್ಸಿನಲ್ಲಿ…
ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಬಳಿಕ ಮಹಾರಾಷ್ಟ್ರ ಪೊಲೀಸರು ತೀವ್ರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ (FIR) ಪ್ರತಿಗಳು ಬಹಿರಂಗಗೊಂಡಿದ್ದು,…
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅನಾಥಾಶ್ರಮದಲ್ಲಿ ವಿಷಾಹಾರ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಹೊಸ ತಿರುವು ದೊರಕಿದೆ. ಆಹಾರ…
ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನು ಕಳವು ಆರೋಪ ಮಾಡಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ…