ತನ್ನ ಸ್ನೇಹಿತರ ಮುಂದೆ ಬಟ್ಟೆ ಚಿಚ್ಚಲು ಪತಿ ತನಗೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. 35 ವರ್ಷದ ಸಂತ್ರಸ್ತ ಮಹಿಳೆ ವಿಎಫ್‌ಎಕ್ಸ್ ಕಲಾವಿದೆಯಾಗಿದ್ದು, ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಖೋರಾಜ್‍ನಲ್ಲಿ ವಾಸವಾಗಿದ್ದಳು. ಆಕೆಯ ಪತಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮೂಲತಃ ಉತ್ತರಾಖಂಡದ ಡೆಹ್ರಾಡೂನ್ ಮೂಲದ ಈ ದಂಪತಿ ಎಂಟು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು, ಮದುವೆಯಾಗಿ ಐದು ವರ್ಷಗಳಾಗಿವೆ. ತನ್ನ ಪತಿ ಕಿರುಕುಳ ನೀಡುತ್ತಿರುವುದಾಗಿ ಆಕೆ ಆರೋಪ ಮಾಡಿದ್ದಾಳೆ. ಮದುವೆಯಾದ ಹೊಸದರಲ್ಲಿ ದಂಪತಿ ಮೊದಲು ಕೋಲ್ಕತ್ತಾಗೆ ಮತ್ತು ನಂತರ ಮುಂಬೈಗೆ ತೆರಳಿದರು.
ಮುಂಬೈನಲ್ಲಿ ಮಹಿಳೆ ಚಲನಚಿತ್ರೋದ್ಯಮದಲ್ಲಿ ವಿಎಫ್‌ಎಕ್ಸ್ ಕಲಾವಿದೆಯಾಗಿ ಕೆಲಸ ಮಾಡಿದಳು. ಮದುವೆಯ ನಂತರ ಮುಂಬೈಗೆ ತೆರಳಿದಾಗ, ಪತಿ ತನ್ನ ಸ್ನೇಹಿತರನ್ನು ಪಾರ್ಟಿಗಳಿಗಾಗಿ ಮನೆಗೆ ಕರೆಯುತ್ತಿದ್ದ. ಪಾರ್ಟಿಗಳ ಸಮಯದಲ್ಲಿ “ಡೇರ್ ಆಂಡ್ ಟ್ರುತ್” ಆಟದ ಹೆಸರಿನಲ್ಲಿ ತನ್ನ ಪತಿ ತನ್ನ ಸ್ನೇಹಿತರ ಮುಂದೆ ತನ್ನ ಬಟ್ಟೆ ಬಿಚ್ಚಲು ಒತ್ತಾಯಿಸುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ. ಒಂದು ವೇಳೆ ಅವಳು ನಿರಾಕರಿಸಿದರೆ ಅಥವಾ ಆಕ್ಷೇಪಿಸಿದರೆ ಪತಿ ತನ್ನನ್ನು ಹೊಡೆಯುತ್ತಾನೆ ಎಂದು ಆಕೆ ಆರೋಪಿಸಿದ್ದಾಳೆ. ತನ್ನ ಗಂಡನ ಈ ಅಶ್ಲೀಲ ಬೇಡಿಕೆಗಳಿಂದಾಗಿ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿಸಿದ್ದಾಳೆ.
ದಂಪತಿಗಳು ಇತ್ತೀಚೆಗೆ ಗುಜರಾತ್‍ನ ಖೋರಾಜ್‍ಗೆ ಸ್ಥಳಾಂತರಗೊಂಡಿದ್ದರು. ಖೋರಾಜ್‍ಗೆ ತೆರಳಿದ ನಂತರ, ಪತಿ ತನಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾನೆ. ಹಾಗಾಗಿ ಆತನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.