Latest

ಅನ್ನಭಾಗ್ಯ ಅಕ್ಕಿ ಕೊಡದಿದ್ದರೆ 1967ಕ್ಕೆ ಕರೆ ಮಾಡಿ

ಕಾರವಾರ : 2025ರ ಫೆಬ್ರವರಿ ಹಾಗೂ ಮಾರ್ಚ ತಿಂಗಳ ಅಕ್ಕಿಯನ್ನು ಸರ್ಕಾರ ಒಟ್ಟಿಗೆ ಕೊಡಲು ನಿರ್ಧರಿಸಿದ್ದು, ಪಡಿತರ ಅಂಗಡಿಯಲ್ಲಿ ಅಕ್ಕಿ ಕೊಡದೇ ಇದ್ದರೆ 1967ಗೆ ಫೋನ್ ಮಾಡಿ’ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಹೇಳಿದೆ. ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾದರೂ ದೂರು ನೀಡುವಂತೆ ಫಲಾನುಭವಿಗಳಿಗೆ ಸೂಚಿಸಲಾಗಿದೆ.

ಗಡಿಭಾಗದಲ್ಲಿ ಅಕ್ಕಿ ಅನಧಿಕೃತ ಸಾಗಾಟ, ಅಕ್ರಮ ಮಾರಾಟ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆಯೂ ಗಮನಹರಿಸಿ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. `ಪಡಿತರ ಚೀಟಿದಾರರಿಗೆ ವಿತರಿಸಿದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಅನಧಿಕೃತವಾಗಿ ದಾಸ್ತಾನು-ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಅವರು ಆದೇಶಿಸಿದರು.

ಅಕ್ಕಿ ವಿತರಣೆ ಕುರಿತಂತೆ ಪಡಿತರ ಅಂಗಡಿಗಳಲ್ಲಿ ಪ್ರತಿ ದಿನದ ವಿತರಣೆಯ ವಿವರ ಮತ್ತು ದಾಸ್ತಾನು ವಿವರಗಳನ್ನು ಪರಿಶೀಲಿಸಬೇಕು. ಪಡಿತರ ವಿತರಣೆಯ ತತ್ರಾಂಶ ಕಾರ್ಯನಿರ್ವಹಣೆಗೆ ಇಂರ್ಟನೆಟ್ ಸಮಸ್ಯೆಯಿದಲ್ಲಿ ಬಿ ಎಸ್ ಎನ್ ಎಲ್ ಮೂಲಕ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗಡಿಬಾಗದಲ್ಲಿ ಅನಧಿಕೃವಾಗಿ ಅಕ್ಕಿಯ ಮಾರಾಟ ಮತ್ತು ಸಾಗಾಟದ ಬಗ್ಗೆ ನಿಗಾ ವಹಿಸಬೇಕು’ ಎಂದವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಡಿತರ ಚೀಟಿಯ ಕೆವೈಸಿಯಲ್ಲಿ ಶೇ 97ರಷ್ಟು ಪ್ರಗತಿಯಾಗಿದ್ದು, ಮಾರ್ಚ್ ತಿಂಗಳ ಕೊನೆಯವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಕಾರ್ಯ ನಡೆಯಲಿದೆ. ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡದೇ ಕೆವೈಸಿ ಮಾಡಿಸಿಕೊಳ್ಳಬೇಕು. ಪಡಿತರ ಚೀಟಿದಾರರು ತಮ್ಮ ಬಯೋ ಮೆಟ್ರಿಕ್ ನೀಡಿದ ತಕ್ಷಣವೇ ಪಡಿತರ ಪಡೆಯಬೇಕು’ ಎಂದವರು ಕರೆ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣ್‌ಕರ್ ಹಾಗೂ ವಿವಿಧ ತಾಲೂಕಿನ ಆಹಾರ ನಿರೀಕ್ಷಕರು ಸಭೆಯಲ್ಲಿದ್ದರು.

ಭ್ರಷ್ಟರ ಬೇಟೆ

Recent Posts

ಮಲಗೋಕೆ ಹಣ ಕೇಳ್ತಾಳೆ, ಮಕ್ಕಳು ಬೇಡ ಅಂತಾಳೆ ಎಂದು ದೂರಿದ ಗಂಡ; ಗಂಡನ ಕಂಜೂಸ್ ಬುದ್ದಿ ಬಿಚ್ಚಿಟ್ಟ ಹೆಂಡತಿ…!

ಮದುವೆಗೆ ಒಪ್ಪಿಕೊಂಡ ಹೆಂಡತಿ, ಆದರೆ ಮಕ್ಕಳನ್ನು ಮಾಡಿಕೊಳ್ಳಲು ನಿರಾಕರಿಸಿದ್ದಾಳೆ ಎಂದು ಗಂಡನಿಂದ ಪೊಲೀಸರಿಗೆ ದೂರು. ಈ ಪ್ರಕರಣದಲ್ಲಿ ಗಂಡನ ಆರೋಪಗಳ…

1 hour ago

7 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ- ಬಳ್ಳಾರಿಯಲ್ಲಿ ಬಿಜೆಪಿ ಮುಖಂಡ ಅರೆಸ್ಟ್..!

ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬಿಜೆಪಿ ಯುವ ಮುಖಂಡ ದೇವು ನಾಯಕ್ (Devu Nayak) ಮೇಲೆ…

1 hour ago

39ನೇ ವಯಸ್ಸಿನಲ್ಲಿ ಅಜ್ಜಿಯಾಗಿರುವ ಚೀನಾದ ಮಹಿಳೆ! ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಅಜ್ಜಿ ಎಂದರೆ ನಮ್ಮ ಕಣ್ಣಿಗೆ ಮೂಡುವ ಚಿತ್ರಣವು 60 ವರ್ಷ ಮೇಲ್ಪಟ್ಟ, ಬೆಳ್ಳಿ ಕೂದಲಿನ ಮಹಿಳೆ. ಆದರೆ, 39ನೇ ವಯಸ್ಸಿನಲ್ಲಿ…

1 hour ago

ನಾಗ್ಪುರ ಹಿಂಸಾಚಾರ: ಮಹಿಳಾ ಪೊಲೀಸರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಜನರ ಬಂಧನ

ನಾಗ್ಪುರದಲ್ಲಿ ನಡೆದ ಹಿಂಸಾಚಾರದ ಬಳಿಕ ಮಹಾರಾಷ್ಟ್ರ ಪೊಲೀಸರು ತೀವ್ರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ (FIR) ಪ್ರತಿಗಳು ಬಹಿರಂಗಗೊಂಡಿದ್ದು,…

1 hour ago

ಮಂಡ್ಯ ಅನಾಥಾಶ್ರಮ ವಿಷಾಹಾರ ಪ್ರಕರಣ: ತನಿಖೆ ಚುರುಕು, ಹೋಟೆಲ್ ಮಾಲೀಕನ ಮೇಲಿನ ದ್ವೇಷವೇ ಕಾರಣ?

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅನಾಥಾಶ್ರಮದಲ್ಲಿ ವಿಷಾಹಾರ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಹೊಸ ತಿರುವು ದೊರಕಿದೆ. ಆಹಾರ…

1 hour ago

ಮೀನು ಕದ್ದ ಆರೋಪ: ಮಲ್ಪೆ ಬಂದರಿನಲ್ಲಿ ದಲಿತ ಮಹಿಳೆಗೆ ಅಮಾನುಷ ಹಲ್ಲೆ – ನಾಲ್ವರು ಬಂಧನ

ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನು ಕಳವು ಆರೋಪ ಮಾಡಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಘಟನೆ…

2 hours ago