ಅಫಜಲಪೂರ: ಮಳೆ ಇಲ್ಲದೆ ಭೀಮಾ ನದಿಯಲ್ಲಿ ನೀರಿಲ್ಲದೆ ರೈತರು ಪರದಾಡುತ್ತಿದ್ದು 13 ದಿನಗಳಕಾಲ ಆಮರಣಾಂತ ಉಪವಾಸ ಸತ್ಯಾಗ್ರಹ ಕುಳಿತು ಶಿವಕುಮಾರ್ ನಾಟಿಕರವರು ಸೊನ್ನ ಬ್ಯಾರೇಜ್‌ಗೆ 1 ಟಿಎಂಸಿ ನೀರು ಬಿಡುಗಡೆ ಮಾಡಿಸಿದರು ಇಂತಹ ಪರಿಸ್ಥಿತಿಯಲ್ಲಿ ಭೀಮಾ ನದಿಯನ್ನು ಅವಲಂಬಿಸಿ ಬದುಕುತ್ತಿರುವ ಸಾಕಷ್ಟು ರೈತರು ನೀರಿಲ್ಲದೆ ಪರದಾಡುತ್ತಿದ್ದಾರೆ ಆದರೆ ಇಲ್ಲಿನ ಮರುಳ ದಂದೆಕೋರರು ಮಾತ್ರ ಯಾವುದೇ ಅಧಿಕಾರಿಗಳ ಭಯವಿಲ್ಲದೆ ರಾಜಾರೋಷವಾಗಿ ಮರಳದಂದೆ ಮಾಡುತ್ತಿದ್ದಾರೆ. ದೇವಲ ಗಾಣಗಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೆಲವು ಹಳ್ಳಿಗಳ ನದಿಯ ದಡದಲ್ಲಿ ಅಕ್ರಮ ಮರುಳು ಸಂಗ್ರಹಣೆ ಮಾಡಿ ರಾತ್ರೋರಾತ್ರಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ಗಳ ಮುಖಾಂತರ ಮರಳನ್ನು ಸಾಗಿಸುವ ದಂದೆ ಎಗ್ಗಿಲ್ಲದೆ ನಡೆಯುತ್ತಿದೆ. ಅದಲ್ಲದೆ ಮರಳದಂದೆ ಕೋರರು ಹೇಳುವ ಪ್ರಕಾರ ನಾವು ಪೊಲೀಸರಿಗೆ ಹಫ್ತಾ ನೀಡಿ ಮರಳು ದಂಧೆಯನ್ನು ಮಾಡುತ್ತಿದ್ದೇವೆಂದು ಹೇಳುತ್ತಿದ್ದಾರೆ ಹಾಗಾದರೆ ಕೆಲವು ಪೊಲೀಸ್ ಪೇದೆಗಳು ಶಾಮಿಲಾಗಿದ್ದಾರೆಯೇ?? ಅನುಮಾನ ಕಾಡುತ್ತಿದೆ.ಗುಳೂರ,ಬಟಗೇರಿ, ದೇವಲ ಗಣಗಾಪುರ್ ಸಂಗಮದ್ ನದಿಯ ದಡದಲ್ಲಿ ಯಾವುದೇ ಪರವಾನಿಗೆಲ್ಲದೆ ಅಕ್ರಮ ಮರಳು ಸಂಗ್ರಹಣೆ ಮಾಡಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಗಣಿ ಅಧಿಕಾರಿಗಳು ಮೌನವಾಗಿದ್ದಾರೆ? ಸರ್ಕಾರದ ನಿಯಮಗಳಿಗೆ ಬೆಲೆ ಇಲ್ಲದಂತಾಗಿದೆ. ಈಗಲಾದರೂ ದೇವಲ ಗಾಣಗಾಪುರ್ ಠಾಣೆಯ ಪಿಎಸ್ಐ ಸಾಹೇಬರೇ ಅಕ್ರಮ ಮರಳು ದಂದೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಯಾವುದೇ ಅಕ್ರಮದಂದೆ ನಡೆಯದಂತೆ ಕ್ರಮ ಜರುಗಿಸಿ.

ವರದಿ : ಸಂಗಮೇಶ್ ಸರಡಗಿ

error: Content is protected !!