
ಬಳ್ಳಾರಿ ಜಿಲ್ಲೆ: ಸಿರಿಗೇರಿ ಗ್ರಾಮದಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕುರುಗೋಡು ಕಡೆಗೆ ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ದೊಡ್ಡ ಪ್ರಮಾಣದ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಆಹಾರ ಇಲಾಖೆ ಸಿಬ್ಬಂದಿ ಹಾಗೂ ಸಿರಿಗೇರಿ ಪೊಲೀಸರು ಭಾನುವಾರ ಜಂಟಿಯಾಗಿ ದಾಳಿ ನಡೆಸಿದ್ದು, ಆಟೋವೊಂದರಲ್ಲಿ ಸಾಗಿಸುತ್ತಿದ್ದ 60 ಚೀಲಗಳಲ್ಲಿ ಒಟ್ಟು 30 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪತ್ತೆ ಹಚ್ಚಿದ್ದಾರೆ. ಅಕ್ಕಿಯ ಮೌಲ್ಯವನ್ನು ಸುಮಾರು 69,000 ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಅಕ್ರಮ ಸಾಗಾಟಕ್ಕೆ ಬಳಸಲಾದ ಆಟೋ ಸಹಿತ ಅಕ್ಕಿಯನ್ನು ವಶಪಡಿಸಿಕೊಂಡ ಅಧಿಕಾರಿಗಳು, ಪ್ರಕರಣವನ್ನು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವತ್ತ ಪೊಲೀಸರು ಕಂದಾಯ ಇಲಾಖೆಯ ಸಹಕಾರದಿಂದ ಮುಂದಿನ ಕ್ರಮ ಕೈಗೊಂಡಿದ್ದಾರೆ.