ಬಳ್ಳಾರಿ ಜಿಲ್ಲೆ: ಸಿರಿಗೇರಿ ಗ್ರಾಮದಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕುರುಗೋಡು ಕಡೆಗೆ ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ದೊಡ್ಡ ಪ್ರಮಾಣದ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಆಹಾರ ಇಲಾಖೆ ಸಿಬ್ಬಂದಿ ಹಾಗೂ ಸಿರಿಗೇರಿ ಪೊಲೀಸರು ಭಾನುವಾರ ಜಂಟಿಯಾಗಿ ದಾಳಿ ನಡೆಸಿದ್ದು, ಆಟೋವೊಂದರಲ್ಲಿ ಸಾಗಿಸುತ್ತಿದ್ದ 60 ಚೀಲಗಳಲ್ಲಿ ಒಟ್ಟು 30 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪತ್ತೆ ಹಚ್ಚಿದ್ದಾರೆ. ಅಕ್ಕಿಯ ಮೌಲ್ಯವನ್ನು ಸುಮಾರು 69,000 ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಅಕ್ರಮ ಸಾಗಾಟಕ್ಕೆ ಬಳಸಲಾದ ಆಟೋ ಸಹಿತ ಅಕ್ಕಿಯನ್ನು ವಶಪಡಿಸಿಕೊಂಡ ಅಧಿಕಾರಿಗಳು, ಪ್ರಕರಣವನ್ನು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವತ್ತ ಪೊಲೀಸರು ಕಂದಾಯ ಇಲಾಖೆಯ ಸಹಕಾರದಿಂದ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಾಜಿಯಾಬಾದ್‌ನ ಜನಮನ ತಲ್ಲಣಗೊಳಿಸಿರುವ ಸೌರಭ್ ರಾಜಪೂತ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪತಿಯನ್ನು ಕ್ರೂರವಾಗಿ ಕೊಂದ ಬಳಿಕ, ಡ್ರಮ್‌ನಲ್ಲಿ…
ಮೈಸೂರು: ನಂಜನಗೂಡು ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ₹1.45 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯನಿರ್ವಾಹಕ ಎಂಜಿನಿಯರ್ ಕಾವೇರಿ ರಂಗನಾಥ್…
ದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆದ ವಿಚಿತ್ರ ಘಟನೆ ಒಂದು ಇಲ್ಲಿನ ಜನರಲ್ಲಿ ಆತಂಕ ಉಂಟುಮಾಡಿದೆ. ಜೀವನಾಂಶ ಹಣದ ಕೊರತೆಯಿಂದ ಪಟ್ಟುಹೋಗಿದ…
ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿರುವ ಭೀಕರ ಪ್ರಕರಣದಿಂದ ಬಿರುಕುಹೋಗಿದೆ. 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಏಳು ದಿನಗಳ ಕಾಲ ಮದ್ಯ…
ಯಾದಗಿರಿ: ನರೇಗಾ (ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಯೋಜನೆಯಡಿ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದಲ್ಲಿ ಭಾರೀ ಅವ್ಯವಹಾರದ…
ಮುಂಡಗೋಡ: 05/04/2025 ರಂದು ಮುಂಡಗೋಡ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು…